ಕೌಟುಂಬಿಕ ಮತ್ತು ಸಾಮಾಜಿಕ ಹಿಂಸೆ ಹಾಗೂ ದೌರ್ಜನ್ಯದ ವಿರುದ್ಧ ಜನಜಾಗೃತಿ ಮೂಡಿಸುವ ಸಲುವಾಗಿ ವನಸುಮ ಟ್ರಸ್ಟ್ ರಿ ಕಟಪಾಡಿ ಉಡುಪಿ ಸಾಮಾಜಿಕ ಹಿನ್ನೆಲೆಯಲ್ಲಿ ಹಿಂಸೆ ನಿಲ್ಲಿಸಿ ಎನ್ನುವ ಸ್ಲೋಗನ್ನೊಂದಿಗೆ ಕೊಡಗು ಮೂಲದ ಉಡುಪಿಯ ವಿದ್ಯಾರ್ಥಿ ಯುವ ಕಲಾವಿದರಿಬ್ಬರು ಮೋಟಾರು ಬೈಕಿನಲ್ಲಿ 3000 ಕಿಲೋ ಮೀಟರ್ ಸುತ್ತಿ ಜಾಗೃತಿ ಮೂಡಿಸುವ ಮಹತ್ತರ ಕಾರ್ಯಕ್ಕೆ ಕೈಗೊಂಡಿದ್ದು ಮೇ ತಿಂಗಳ 25 ರಿಂದ ಆರಂಭಿಸಿರುವ ಈ ಜಾಗೃತಿ ಪಯಣ ನಿರಂತರ 12 ದಿನಗಳ ಬಳಿಕ ಜೂ.5ರಂದು ಬೆಳಿಗ್ಗೆ ಪಂಜ ಮೂಲಕ ಹಾದು ಉಡುಪಿಯಲ್ಲಿ ಸಮಾಗಮ ಗೊಳ್ಳಲಿದೆ.









ರಂಗ ನಿರ್ದೇಶಕ ಚಿತ್ರನಟ ಬಾಸುಮ ಕೊಡಗು ಸಂಗೀತ ಕಲಾವಿದೆ ಕಾವ್ಯವಾಣಿ ದಂಪತಿಯ ಪುತ್ರ ರಂಗಭೂಮಿ ಚಲನಚಿತ್ರ ನಟ ಸಂಗೀತ ಸಂಯೋಜಕ ಮಣಿಪಾಲದ ಮಾಹೆಯ ಮೀಡಿಯಾ ಕಮ್ಯುನಿಕೇಶನ್ ವಿದ್ಯಾರ್ಥಿ ದೃಶ್ ಕೊಡಗು ಮತ್ತು ಉಡುಪಿಯ ಇಂದ್ರಾಳಿಯ ಆರತಿ ಎಂಬವರ ಪುತ್ರ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿ ಉಜ್ವಲ್ ಕಾಮತ್ ಜೊತೆಯಾಗಿ ಕರ್ನಾಟಕ ಗೋವಾ ಹಾಗೂ ಮಹಾರಾಷ್ಟ್ರ ಸೇರಿದಂತೆ ರಾಜ್ಯಗಳಲ್ಲಿ 3000 ಕಿಲೋಮೀಟರ್ ಮೂಲಕ ಬೈಕ್ ಮೂಲಕ ಈ ಸಂದೇಶ ಜಾಥಾವನ್ನು ಕೈಗೊಂಡಿದ್ದಾರೆ ಇದರಲ್ಲಿ ಸುಮಾರು 50ಕ್ಕಿಂತ ಹೆಚ್ಚು ಜೇಸಿ ಘಟಕಗಳನ್ನು ಭೇಟಿಯಾಗಿವೆ. ಈ ಜಾಥಾ ಯುವ ಜನತೆಯಲ್ಲಿ ಜಾಗೃತಿ ಮೂಡಿಸುವ ವ್ಯಕ್ತಿತ್ವ ಬದಲಾವಣೆ ಜಾಗೃತಿ ಮೂಡಿಸಿ ಸ್ವಚ್ಛ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಲಿದೆ.
ಇವರಿಗೆ ಜೇಸಿಐ ಪಂಜ ಪಂಚಶ್ರೀ ವತಿಯಿಂದ ಸ್ವಾಗತಿಸಿ, ಗೌರವಿಸಿಲಾಯಿತು.ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ HGF ವಾಚಣ್ಣ ಕೆರೆಮೂಲೆ, ಸ್ಥಾಪಕಾಧ್ಯಕ್ಷ ಜೇಸಿ ದೇವಿ ಪ್ರಸಾದ್ ಜಾಕೆ ,ಪೂರ್ವಾ ಅಧ್ಯಕ್ಷರುಗಳು,ಸದಸ್ಯರುಗಳು ಉಪಸ್ಥಿತರಿದ್ದರು.ಈ ಸಂದರ್ಭ ಅಧ್ಯಕ್ಷ ವಾಚಣ್ಣ ಕೆರೆಮೂಲೆ ಸ್ವಾಗತಿಸಿ ಕಾರ್ಯದರ್ಶಿ ಜೇಸಿ ಅಶ್ವಥ್ ಬಾಬ್ಲುಬೆಟ್ಟು ವಂದಿಸಿದರು.










