ಆಲೆಟ್ಟಿ : ಕೃಷಿ ವಿಕಸಿತ ಸಂಕಲ್ಪ ಅಭಿಯಾನ ಕಾರ್ಯಕ್ರಮ

0

ಆಲೆಟ್ಟಿ ಗ್ರಾಮದ ಕೃಷಿಕರಿಗಾಗಿ ಕೃಷಿ ವಿಕಸಿತ ಸಂಕಲ್ಪ ಅಭಿಯಾನ ಕಾರ್ಯಕ್ರಮವು ರಮೇಶ್ ನಾಯ್ಕ ತಲೇಪಲ್ಲ ಅವರ ಮನೆಯಲ್ಲಿ ಜೂ. 12 ರಂದು ನಡೆಯಿತು.

ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿಕರಿಗೆ ಸಿಗುವ ತರಬೇತಿಗಳ ಬಗ್ಗೆ ತೋಟಗಾರಿಕಾ ಬೆಳೆ, ಗೇರು ಕೃಷಿ ಹಾಗೂ ಗೇರು ಹಣ್ಣಿನ ಮೌಲ್ಯವರ್ಧನೆ, ಮೀನು ಕೃಷಿ ಹಣ್ಣಿನ ಸಸಿಗಳ ಬಗ್ಗೆ ಮಾಹಿತಿ ನೀಡಿದರು. ರೈತರಿಗೆ ಇರುವ ಸಮಸ್ಯೆಗಳ ಬಗ್ಗೆ ತಿಳಿದುಕೊಂಡರು.

ಹಿರಿಯ ವಿಜ್ಞಾನಿ ಮತ್ತು KVK ಮಂಗಳೂರಿನ ಕೆವಿಕೆ ಮುಖ್ಯಸ್ಥ
ಡಾ.ರಮೇಶ್, ಮೀನುಗಾರಿಕಾ ವಿಜ್ಞಾನಿ ಡಾ. ರವೀಂದ್ರ ಗೌಡ ಪಾಟೀಲ್, ಡಾ.ಜ್ಯೋತಿ ನಿಶಾದ್ ಗೇರು ಸಂಶೋಧನಾ ಕೇಂದ್ರ ಪುತ್ತೂರು , ಡಾ.ಮಲ್ಲಿಕಾರ್ಜುನ ಮಣ್ಣು ಪರೀಕ್ಷಾ ವಿಜ್ಞಾನಿಗಳು, ರವಿ ಕೆವಿಕೆ ಮಂಗಳೂರು, ಶ್ರೀಮತಿ ಜಯಲಕ್ಷ್ಮಿ ಟಿ.ಡಿ ತಾಲೂಕ್ ಪಂಚಾಯತ್ ಸುಳ್ಯ , ಶ್ರೀಮತಿ ಮೋಹಿನಿ ವಿಶ್ವನಾಥ್ ( ನಿಶಾ ) ಕೃಷಿ ಸಖಿ ಸಂಪಾಜೆ, ಶ್ರೀಮತಿ ವಿಜಯ ಕೃಷಿ ಸಖಿ ಜಾಲ್ಸೂರು, ಶ್ರೀಮತಿ ರೇಣುಕಾ ಎಂಬಿಕೆ ಆಲೆಟ್ಟಿ, ಶ್ರೀಮತಿ ಲೀಲಾವತಿ ಎಲ್ ಸಿ ಆರ್ ಪಿ ಆಲೆಟ್ಟಿ, ಕುಮಾರಿ ಲೋಚನ ಕೃಷಿ ಸಖಿ ಆಲೆಟ್ಟಿ, ಹಾಗೂ ರಂಗತ್ತಮಲೆ ಮತ್ತು ಬಡ್ಡಡ್ಕ ಭಾಗದ ಕೃಷಿಕರು ಉಪಸ್ಥಿತರಿದ್ದರು.