ನೇರವಾಗಿ ಗಾರ್ಮೆಂಟ್ಸ್ ಮುಖಾಂತರ ರೀಟೆಲ್ ಗ್ರಾಹಕರಿಗೆ 80% ರವರೆಗೆ ರೀಯಾಯಿತಿ
ಸುಳ್ಯ ಖಾಸಗಿ ಬಸ್ ನಿಲ್ದಾಣ ಹಿಂಭಾಗದ ಶಿವ ಕೃಪಾ ಕಲಾಮಂದಿರದಲ್ಲಿ ನೇರವಾಗಿ ಗಾರ್ಮೆಂಟ್ಸ್ ಮುಖಾಂತರ ರೀಟೆಲ್ ಗ್ರಾಹಕರಿಗೆ 80% ವರೆಗೆ ರಿಯಾಯಿತಿಯಲ್ಲಿ ಎಲ್ಲಾ ತರಹದ ಉಡುಪುಗಳು ಜುಲೈ 25ರವರೆಗೆ ಮಾರಾಟವಾಗುತ್ತಿದೆ.

ಇದರ ಉದ್ಘಾಟನೆ ಕಾರ್ಯಕ್ರಮವು ಜು.3ರಂದು ಶಿವ ಕೃಪಾ ಕಲಾಮಂದಿರದಲ್ಲಿ ನಡೆಯಿತು. ಮಾಟ್ರಿಕ್ಸ್ ಎಜ್ಯುಕೇಶನ್ ಇನ್ಸ್ಟಿಟ್ಯುಷನ್ ಪ್ರಾಂಶುಪಾಲ ವಿಷ್ಣುಪ್ರಸಾದ್ ನಾರ್ಕೋಡು ಮತ್ತು ಶಿವ ಕೃಪಾ ಕಲಾಮಂದಿರದ ವ್ಯವಸ್ಥಾಪಕರಾದ ವೆಂಕಟೇಶ್ ಭಟ್ ರವರು ಜಂಟಿಯಾಗಿ ದೀಪ ಬೆಳಗಿಸಿದರು.
ನಂತರ ಪ್ರಾಂಶುಪಾಲ ವಿಷ್ಣುಪ್ರಸಾದ್ ನಾರ್ಕೋಡು ಮಾತನಾಡಿ ಶುಭ ಹಾರೈಸಿದರು.









ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾಟ್ರಿಕ್ಸ್ ಎಜ್ಯುಕೇಶನ್ ಇನ್ಸ್ಟಿಟ್ಯುಷನ್ ಪ್ರಾದ್ಯಪಕ ರಂಜಿತ್, ಸುದ್ದಿ ಪತ್ರಿಕೆಯ ವರದಿಗಾರ ಕೃಷ್ಣ ಬೆಟ್ಟ, ಸಂಸ್ಥೆಯ ಪಾಲುದಾರರಾದ ರುದ್ರೇಶ್ ಎಸ್.ಎಂ, ಗಿರಿಯಪ್ಪ ಪೂಜಾರಿ ಉಪ್ಪಿನಂಗಡಿ ಮತ್ತು ಸಿಬ್ಬಂದಿ, ಮಾಟ್ರಿಕ್ಸ್ ಎಜ್ಯುಕೇಶನ್ ಇನ್ಸ್ಟಿಟ್ಯುಷನ್ ಸಂಸ್ಥೆಯ ಶಿಕ್ಷಕರು, ಇತರರು ಉಪಸ್ಥಿತರಿದ್ದರು. ಗಿರಿಯಪ್ಪ ಪೂಜಾರಿ ಉಪ್ಪಿನಂಗಡಿ ಸ್ವಾಗತಿಸಿ, ವಂದಿಸಿದರು.










