ಬೂಡು ಪರಿಸರದಲ್ಲಿ ಇತ್ತೀಚೆಗೆ ಬೇಸಿಗೆಕಾಲ ದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯ ಬದಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಇದೀಗ ಮಳೆಯ ನೀರು ಮೇಲಿನಿಂದ ರಸ್ತೆಯ ಮೂಲಕ ಹರಿದು ಬಂದು ಕೆಳ ಭಾಗದಲ್ಲಿರುವ ಮನೆಯ ಅಂಗಳಕ್ಕೆ ನುಗ್ಗಿದೆ.









ಕೆಸರು ಮಿಶ್ರಿತ ನೀರುಹರಿಯುವುದರಿಂದ ರಸ್ತೆಯಲ್ಲಿ ನಡೆದಾಡಲು ಕಷ್ಟವಾಗಿದೆ.ಮನೆಯ ಸುತ್ತಲೂ ಸಂಪೂರ್ಣ ಕೆರುಮಯವಾಗಿದ್ದು ತುಂಬಾ ಸಮಸ್ಯೆ ಎದುರಿಸುವಂತಾಗಿದೆ. ಸಮಸ್ಯೆಯ ಕುರಿತು ನ.ಪಂ.ವಾರ್ಡ್ ಸದಸ್ಯರು ಅಥವಾ ಅಧಿಕಾರಿಗಳು ಗಮನ ಹರಿಸಿ ಮಳೆ ನೀರು ಮನೆಗೆ ಹರಿದು ಹೋಗದಂತೆಸಮರ್ಪಕವಾಗಿ ಚರಂಡಿ ವ್ಯವಸ್ಥೆ ನಿರ್ಮಿಸಿಕೊಡಬೇಕೆಂದು ಬೂಡು ಪರಿಸರದ ಮನೆಯವರು ಆಗ್ರಹಿಸಿದ್ದಾರೆ.










