ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ಮೇಳ ಜು.12 ರ ತನಕ ಮುಂದುವರಿಕೆ

0

ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇದರ ಆಶ್ರಯದಲ್ಲಿ ನಡೆಯುತ್ತಿರುವ ಉಚಿತ ಆರೋಗ್ಯ ಮೇಳವು ಸಾರ್ವಜನಿಕರ ಸದುಪಯೋಗಕ್ಕಾಗಿ
ಜು.12 ರ ವರೆಗೆ ಮುಂದುವರಿಸಲಾಗಿದೆ .

ಉಚಿತ ಆರೋಗ್ಯ ಮೇಳವು ಜೂ.24 ರಿಂದ ಮೊದಲ್ಗೊಂಡು ಜು.4 ರ ತನಕ ಎಂದು ನಿಗದಿ ಪಡಿಸಲಾಗಿತ್ತು. ಇದೀಗ ಮಳೆಗಾಲದಲ್ಲಿ ಅನಾರೋಗ್ಯ ಹೆಚ್ಚಾಗಿ ಕಂಡು ಬರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರ ಹೆಚ್ಚಿನ ಅನೂಕೂಲಕ್ಕಾಗಿ ಮತ್ತಷ್ಟು ದಿನಗಳ ಕಾಲ ಮುಂದುವರಿಸಿರುವುದಾಗಿ ತಿಳಿದು ಬಂದಿದೆ.