ಸರಳ ಮತ್ತು ಸಜ್ಜನಿಕೆಯ ಮೇರು ವ್ಯಕ್ತಿಯನ್ನು ಸುಳ್ಯ ಕಳೆದುಕೊಂಡಿದೆ: ಗಣ್ಯರಿಂದ ನುಡಿನಮನ
ಇತ್ತೀಚೆಗೆ ಅಗಲಿದ ಸುಳ್ಯ ತಾಲೂಕು ಬೋರ್ಡ್ ಮಾಜಿ ಅಧ್ಯಕ್ಷ, ದ.ಕ.ಜಿಲ್ಲಾ ಪರಿಷತ್ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಐ. ಕುಂಞಿಪಳ್ಳಿ ವಕೀಲರವರಿಗೆ ಸಾರ್ವಜನಿಕ ನುಡಿ ನಮನ ಮತ್ತು ಶ್ರದ್ದಾಂಜಲಿ ಕಾರ್ಯಕ್ರಮ ಜು.೪ ರಂದು ಸುಳ್ಯ ಅನ್ಸಾರಿಯ ಗಲ್ಫ್ ಆಡಿಟೋರಿಯಂನಲ್ಲಿ ನಡೆಯಿತು.
ಸುಳ್ಯ ತಾಲೂಕು ವಕೀಲರ ಸಂಘದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿಯವರು ಸಾರ್ವಜನಿಕ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.









ಸಭೆಗೆ ಆಗಮಿಸಿದ್ದ ಸುಳ್ಯ ಎಂ ಬಿ ಪೌಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್, ಸುಳ್ಯ ತಾಲೂಕು ಬಂಟರ ಸಂಘದ ಅಧ್ಯಕ್ಷ ಎನ್. ಜಯಪ್ರಕಾಶ್ ರೈ, ಇಬ್ರಾಹಿಂ ಗೂನಡ್ಕ, ಸುಳ್ಯ ನಗರ ಪಂಚಾಯತ್ ಸದಸ್ಯ ಎಂ. ವೆಂಕಪ್ಪ ಗೌಡ, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಶ್ರೀ ಕ್ಷೇತ್ರ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಆರ್. ಗಂಗಾಧರ್, ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ್ ರೈ, ಕಾಂಗ್ರೆಸ್ ಜಿಲ್ಲಾ ಸಮಿತಿ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಸದಸ್ಯ ಕೆ. ಪಿ. ಜಾನಿ, ಶ್ರೀ ಶಾರದಾಂ ಸೇವಾ ಸಮಿತಿ ಗೌರವಾಧ್ಯಕ್ಷ ಗೋಕುಲ್‌ದಾಸ್ ಮೊದಲಾದವರು ಮಾತನಾಡಿ ‘ಹಾಜಿ ಕುಂಞಿ ಪಳ್ಳಿ ವಕೀಲರು ಸರಳ ಸಜ್ಜನಿಕೆಯ ಮೇರು ವ್ಯಕ್ತಿತ್ವದವರಾಗಿದ್ದರು. ಅವರ ನಿಧನದಿಂದಾಗಿ ಸುಳ್ಯ ಓರ್ವ ಉತ್ತಮ ವ್ಯಕ್ತಿಯನ್ನು ಕಳೆದುಕೊಂಡ ಹಾಗೆ ಆಗಿದೆ. ಸಮಾಜಕ್ಕೆ ಅನೇಕ ಶಿಷ್ಯ ಬಣವನ್ನು ನೀಡಿರುವ ಅವರು ಕೇವಲ ಓರ್ವ ವಕೀಲರಾಗಿ ಮಾತ್ರವಲ್ಲ ಸಮಾಜ ಸೇವಕನಾಗಿ, ರಾಜಕೀಯ, ಧಾರ್ಮಿಕ, ನಾಯಕನಾಗಿ ಸರ್ವ ಧರ್ಮಿಯರ ಪ್ರೀತಿ ಪಾತ್ರರಾಗಿ ಸಮಾಜದಲ್ಲಿ ಮಾದರಿ ಜೀವನ ನಡೆಸಿದವರು. ಅಂತವರು ನಮಗೆ ತೋರಿಸಿಕೊಟ್ಟ ಸೌಹಾರ್ದತೆಯ ಮಾರ್ಗವನ್ನು ಜೀವನದಲ್ಲಿ ಎಲ್ಲರೂ ರೂಢಿಸಿಕೊಳ್ಳಬೇಕು ಎಂದು ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ನುಡಿನಮನಗಳನ್ನು ಸಲ್ಲಿಸಿದರು.
ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಪಿ ಎಸ್ ಗಂಗಾಧರ್, ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಮಹಮ್ಮದ್ ಕೆಎಂಎಸ್, ನ. ಪಂ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್ ಅರಂಬೂರು, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ಶಿಕ್ಷಕರುಗಳಾದ ಚಂದ್ರಶೇಖರ ಪೇರಾಲ್, ಪ್ರಾಂಶುಪಾಲ ದಾಮೋದರ ಗೌಡ, ದಲಿತ ಮುಖಂಡ ನಂದರಾಜ್ ಸಂಕೇಶ್, ಅಲ್ಪ ಸಂಖ್ಯಾತರ ಸೊಸೈಟಿ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ, ನ ಪಂ ಸದಸ್ಯರುಗಳಾದ ಕೆ.ಎಸ್. ಉಮ್ಮರ್, ರಿಯಾಜ್ ಕಟ್ಟೆಕ್ಕಾರ್ಸ್, ನಾಮ ನಿರ್ದೇಶಕ ಸದಸ್ಯರುಗಳಾದ ಸಿದ್ದೀಕ್ ಕೊಕ್ಕೋ, ರಾಜು ಪಂಡಿತ್, ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಮುಖಂಡರುಗಳಾದ ಮೊಹಮ್ಮದ್ ಕುಂಞಿ ಗೂನಡ್ಕ, ಗಫೂರ್ ಕಲ್ಮಡ್ಕ, ಇಸ್ಮಾಯಿಲ್ ಪಡ್ಪಿನಂಗಡಿ, ನ್ಯಾಯವಾದಿ ಮೂಸಾ ಪೈಂಬೆಚ್ಚಾಲು, ಮಕ್ಕಳ ರಕ್ಷಣಾ ಕಲ್ಯಾಣ ಸಮಿತಿ ಜಿಲ್ಲಾ ಸದಸ್ಯ ಅಬೂಬಕ್ಕರ್ ಅಡ್ಕಾರ್, ಹರೀಶ್ ಉಬರಡ್ಕ, ಸತ್ಯ ಕುಮಾರ್ ಆಡಿಂಜ, ಆರ್.ಬಿ. ಬಶೀರ್ ಪೈಚಾರ್, ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್ಸ್, ಆಶ್ರಫ್ ಗುಂಡಿ, ಧೀರಾ ಕ್ರಾಸ್ತಾ, ತಾಜ್ ಮೊಹಮ್ಮದ್ ಸಂಪಾಜೆ, ಲತೀಫ್ ಹರ್ಲಡ್ಕ, ರಾಮಚಂದ್ರ ಪೆಲ್ತಡ್ಕ ಹಾಗೂ ಅನೇಕ ಮಂದಿ ಗಣ್ಯರುಗಳು ಭಾಗವಹಿಸಿದ್ದರು.
ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕೆಪೆಕ್ ಮಾಜಿ ನಿರ್ದೇಶಕ ಪಿ.ಎ. ಮಹಮ್ಮದ್ ವಂದಿಸಿದರು. ಹಾಫಿಲ್ ಹಾಮಿದ್ ಹಿಮಮಿ ಸಖಾಫಿ ಮೃತರ ಮಗಫಿರತ್‌ಗಾಗಿ ಪ್ರಾರ್ಥನೆ ನೆರವೇರಿಸಿದರು. ಚಿರಶಾಂತಿಗಾಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.










