ಗೂನಡ್ಕ : ಕೂರತ್ ತಂಙಳ್ ಅನುಸ್ಮರಣೆ ಹಾಗೂ ಸ್ವಲಾತ್ ಮಜ್ಲಿಸ್

0

ಹಿಮಾಯತುಲ್ ಇಸ್ಲಾಂ ಜಮಾಅತ್ ಸಮಿತಿ ಬದ್ರಿಯಾ ಜುಮಾ ಮಸೀದಿ ಗೂನಡ್ಕ ಇದರ ವತಿಯಿಂದ
ಮರ್ಹೂಂ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಇವರ ಪ್ರಥಮ ಆಂಡ್ ದಿನದ ಪ್ರಯುಕ್ತ ಕೂರತ್ ಸಾದಾತ್ ಅನುಸ್ಮರಣೆ ಮತ್ತು ತಹ್ಲೀಲ್ ಸಮರ್ಪಣೆ ಹಾಗೂ ಮಾಸಿಕ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮವು ಗೂನಡ್ಕ ಬದ್ರಿಯಾ ಜುಮಾ ಮಸೀದಿಯಲ್ಲಿ ಜರುಗಿತು.


ಸೈಯ್ಯದ್ ಕೂರತ್ ತಂಙಳ್ ಅವರ ಪುತ್ರ ಅಸಯ್ಯದ್ ಮಸ್ಹೂದ್ ತಂಙಳ್ ರವರು ದುವಾ ಮಜ್ಲಿಸಿಗೆ ನೇತೃತ್ವ ನೀಡಿದರು.
ಖತೀಬರಾದ ಬಹು. ಅಬೂಬಕ್ಕರ್ ಸಿದ್ದೀಖ್ ಸಖಾಫಿ ಅಲ್ ಹರ್ಷದಿ ಧಾರ್ಮಿಕ ಉಪನ್ಯಾಸ ನೀಡಿದರು.
ಈ ಸಂದರ್ಭ ಗೂನಡ್ಕ ಮಸೀದಿಗೆ ಪ್ರಥಮ ಬಾರಿ ಆಗಮಿಸಿದ
ಬಹು ಅಸ್ಸಯ್ಯದ್ ಮಸ್ಹೂದ್ ತಂಙಳ್ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಜಮಾಅತ್ ಅದ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಜಮಾಅತ್ ನ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಜಮಾಅತ್ ಸದಸ್ಯರು, ನೆರೆಯ ಜಮಾಅತ್ ಗಳ ಸದಸ್ಯರು ಪಾಲ್ಗೊಂಡಿದ್ದರು.