ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ನೂತನ ಸೇವಾ ಸಮಿತಿ ರಚನೆ

0

ಸಂಚಾಲಕರಾಗಿ ಕಿಶೋರ್ ಕಾಯರ್ತೋಡಿ, ಸಹಸಂಚಾಲಕರಾಗಿ ಶ್ರೀಮತಿ ವಿಜಯ ಶೀನಪ್ಪ


ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ನೂತನ ಸೇವಾ ಸಮಿತಿ ರಚನೆ ಮಾಡಲಾಯಿತು.
ದೇವಾಲಯದಲ್ಲಿ ವಾರ್ಷಿಕವಾಗಿ ನಡೆಯುವ ಹಬ್ಬಗಳ ಆಚರಣೆಯ ವ್ಯವಸ್ಥೆಯನ್ನು ನೋಡಿಕೊಳ್ಳಲು ವರ್ಷಂಪ್ರತಿ ಸೇವಾ ಸಮಿತಿಯನ್ನು ರಚಿಸುತ್ತಿದ್ದು, ಈ ಸಲದ ಸಂಚಾಲಕರಾಗಿ ಕಿಶೋರ್ ಕಾಯರ್ತೋಡಿ, ಸಹಸಂಚಾಲಕರಾಗಿ ಶ್ರೀಮತಿ ವಿಜಯ ಶೀನಪ್ಪರವರನ್ನು ಆಯ್ಕೆ ಮಾಡಲಾಯಿತು.


ಸಭೆಯ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ ವಹಿಸಿದ್ದು, ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಮಾಜಿ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದು, ಮುಂದೆ ಆಚರಿಸಲಿರುವ ನಾಗರಪಂಚಮಿ, ಕಾರ್ತಿಕ ಪೂಜೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಕಾಯರ್ತೋಡಿ ಬೈಲಿನ ಭಕ್ತಾದಿಗಳು ಇದ್ದು, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಶೃತಿ ಮಂಜುನಾಥ್ ವಂದಿಸಿದರು.