ಜು. 14: ಸುಳ್ಯದಲ್ಲಿ ಕರ್ನಾಟಕ ಕಟ್ಟಡ ನಿರ್ಮಾಣ ಸಮಿತಿ ಮತ್ತು ಭಾರತೀಯ ಮಜ್ದೂರ್ ಸಂಘದಿಂದ ಪ್ರತಿಭಟನೆ

0

ಬಾಳಿಲದಲ್ಲಿ ಗ್ರಾಮ ಮಟ್ಟದ ಸಭೆ, ಸಮಿತಿ ರಚನೆ

ಕರ್ನಾಟಕ ಕಟ್ಟಡ ನಿರ್ಮಾಣ ಸಮಿತಿ ಮತ್ತು ಭಾರತೀಯ ಮಜ್ದೂರ್ ಸಂಘದ ಆಶ್ರಯದಲ್ಲಿ ಜು. 14ರಂದು ಸುಳ್ಯದಲ್ಲಿ ಪ್ರತಿಭಟನೆ ನಡೆಯಲಿದ್ದು, ಈ ಬಗ್ಗೆ ಗ್ರಾಮ ಮಟ್ಟದ ಸಮಿತಿ ರಚನೆ ಜು. 10ರಂದು ಮುಪ್ಪೇರ್ಯದ ಶ್ರೀ ಧರ್ಮಶಾಸ್ತ ಭಜನಾ ಮಂದಿರದಲ್ಲಿ ನಡೆಯಿತು. ಸಭೆಯಲ್ಲಿ ಸಂಘದ ತಾಲೂಕು ಅಧ್ಯಕ್ಷರಾದ ಮಧುಸೂದನ್ ಮಾಹಿತಿ ನೀಡಿದರು. ಬೆಳ್ಳಾರೆ ಗ್ರಾಮ ಸಮಿತಿಯ ಸಂಚಾಲಕರಾದ ದಿವಾಕರ ಬಾಳಿಲ ಸೇರಿದಂತೆ ಹಲವು ಮಂದಿ ಕಟ್ಟಡ ಕಾರ್ಮಿಕರು ಸಭೆಯಲ್ಲಿ ಭಾಗವಹಿಸಿದ್ದರು.
ಗ್ರಾಮ ಸಮಿತಿ ಅಧ್ಯಕ್ಷ ರವಿಪ್ರಕಾಶ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ನಾರಾಯಣ ಚಾಕೋಟೆಡ್ಕ ವಂದಿಸಿದರು.
ಗ್ರಾಮ ಸಮಿತಿಯ ಅಧ್ಯಕ್ಷರಾಗಿ ರವಿಪ್ರಕಾಶ್ ಮುಪ್ಪೇರಿಯ, ಉಪಾಧ್ಯಕ್ಷರುಗಳಾಗಿ ಗಂಗಾಧರ ತೋಟದಮೂಲೆ ಮತ್ತು ಕುಶಾಲಪ್ಪ ದೋಳ, ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ ಚಾಕೋಟೇಡ್ಕ, ಕೋಶಾಧಿಕಾರಿಯಾಗಿ ಯಶವಂತ ಚಾಕೋಟೆಡ್ಕ ಮತ್ತು ಎಲ್ಲಾ ಕಾರ್ಮಿಕರನ್ನು ಸದಸ್ಯರಾಗಿ ನೇಮಿಸಲಾಯಿತು.