ಶಾಂತಿನಗರ:ನೂರುಲ್ ಇಸ್ಲಾಂ ಮದ್ರಸ ದಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್ ಪ್ರಾರಂಭೋತ್ಸವ

0

ಪೈಗಂಬರ್ ರವರ ಪ್ರೀತಿ ಸಂಪಾದಿಸಲು ಸ್ವಲಾತ್ ಉತ್ತಮ ಮಾರ್ಗ : ಸೈಯ್ಯಿದ್ ಕುಂಞಿ ಕೋಯ ತಂಙಳ್

ಶಾಂತಿನಗರ ನೂರುಲ್ ಇಸ್ಲಾಂ ಮದರಸದಲ್ಲಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಇದರ ವತಿಯಿಂದ ಮಾಸಿಕ ಸ್ವಲಾತ್ ಮಜ್ಲೀಸ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜುಲೈ 13 ರಂದು ಶಾಂತಿನಗರ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಸೈಯ್ಯಿದ್ ಕುಂಞಿಕೋಯ ಸಅದಿ ತಂಙಳ್ ನಾವೂರು ರವರು ಸ್ವಲಾತ್ ಮಜ್ಲಿಸ್ ನ ನೇತೃತ್ವವನ್ನು ವಹಿಸಿ ಮಾಸಿಕ ಸ್ವಲಾತ್ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಮೊಗರ್ಪಣೆ ಜುಮಾ ಮಸೀದಿಯ ಮುದರ್ರಿಸ್ ಅಬ್ದುಲ್ ಖಾದರ್ ಸಖಾಫಿ ಅಲ್ ಖಾಮಿಲ್ ರವರು ಪೈಗಂಬರ್ ರವರ ಸಂದೇಶ ಭಾಷಣವನ್ನು ನೀಡಿ ಸ್ವಲಾತಿನ ಮಹತ್ವ ಹಾಗೂ ಅದರಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ಪ್ರಭಾಷಣ ನೀಡಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಪೈಚಾರ್ ಮಸೀದಿಯ ಖತೀಬರು ಶಮೀರ್ ನಹೀಮಿರವರು ಮಾತನಾಡಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಮಿಟಿಯ ಅಧ್ಯಕ್ಷ ಹಾಜಿ ಪಳ್ಳಿ ಕುಂಞಿ ಯವರು ವಹಿಸಿದ್ದರು.

ವೇದಿಕೆಯಲ್ಲಿ ಸುಳ್ಯದ ಯುವ ಉದ್ಯಮಿಗಳು ಹಾಗೂ ದಾನಿಗಳು ಆದ ಅಬ್ದುಲ್ ಲತೀಫ್ ಹರ್ಲಡ್ಕ ಹಾಗೂ ಕರ್ನಾಟಕ ರಾಜ್ಯ ಸರಕಾರ ಗ್ಯಾರಂಟಿ ಅನುಷ್ಠಾನ ಸಮಿತಿಯ ಸುಳ್ಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಮೊಗರ್ಪಣೆ ಮಸೀದಿ ಕಮಿಟಿಯ ಉಪಾಧ್ಯಕ್ಷ ಸಿ ಎಂ ಉಸ್ಮಾನ್ ಸೇರಿದಂತೆ ವಿವಿಧ ಮುಖಂಡರುಗಳು ಉಪಸ್ಥಿತರಿದ್ದರು.

ಶಾಂತಿನಗರ ಮದ್ರಸಾ ಸದರ್ ಮೊಅಲ್ಲಿಂ ಅಬ್ದುಲ್ ರಶೀದ್ ಝೖನಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ (ಅಂದು) ಹಾಗೂ ಸಮಿತಿಯ ಎಲ್ಲಾ ಸದಸ್ಯರುಗಳು ಸಹಕರಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಾಯ ಧನ ನೀಡಿ ಪ್ರೋತ್ಸಾಹವನ್ನು ನೀಡಿದ ಗಣ್ಯರುಗಳನ್ನು ಸಮಿತಿ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕೊನೆಯಲ್ಲಿ ಪ್ರಸಾದ ವಿತರಣೆ ನಡೆಯಿತು. ಸ್ಥಳೀಯ ನೂರಾರು ಮುಸ್ಲಿಂ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.