ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಆಟಿ ಸೇಲ್ ಪ್ರಯುಕ್ತ ಗೋಲ್ಡನ್ ಆಫರ್

0

ಚಿನ್ನ, ವಜ್ರ ಮತ್ತು ಬೆಳ್ಳಿಯ ಆಭರಣಗಳ ಖರೀದಿಗೆ ವಿಶೇಷ ಕೊಡುಗೆ


ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳು ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಜು. ೧೨ ರಿಂದ ಆಟಿ ಸೇಲ್ ಆರಂಭಗೊಂಡಿದ್ದು, ಚಿನ್ನ ಖರೀದಿಸುವ ಗ್ರಾಹಕರಿಗಿದು ಗೋಲ್ಡನ್ ಅಪೋರ್ಚುನಿಟಿಯಾಗಿದೆ

. ಪುತ್ತೂರು, ಸುಳ್ಯ ಹಾಗೂ ಮೂಡಬಿದ್ರೆಯಲ್ಲಿ ಮಳಿಗೆಗಳನ್ನು ಹೊಂದಿರುವ ಈ ಜ್ಯುವೆಲ್ಲರ್ಸ್‌ನಲ್ಲಿ ಚಿನ್ನಾಭರಣ, ಬೆಳ್ಳಿ ಆಭರಣಗಳ ಜೊತೆಗೆ ಉತ್ಕೃಷ್ಟ ಇಎಫ್ ವಿವಿಎಸ್ ಶ್ರೇಣಿಯ ನೈಸರ್ಗಿಕ ವಜ್ರಾಭರಣಗಳನ್ನು ಅತ್ಯಾಕರ್ಷಕ ಬೆಲೆಗಳಲ್ಲಿ ನೀಡಲಾಗುತ್ತಿದೆ. ಈ ಆಫರ್ ಜು.೨೫ರ ವರೆಗೆ ಮಾತ್ರ ನೀಡಲಾಗುತ್ತಿದ್ದು, ಷರತ್ತುಗಳ ಅನ್ವಯದೊಂದಿಗೆ ಈ ಸ್ಪೆಷಲ್ ಆಫರ್ ಎಲ್ಲಾ ಮಳಿಗೆಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ.

ಈ ಆಫರ್‌ನಲ್ಲಿ ಗ್ರಾಹಕರು ಖರೀದಿಸುವ ಚಿನ್ನಾಭರಗಳ ಮೇಲೆ ಪ್ರತಿ ಗ್ರಾಂ.ಗೆ ೩೦೦ ರೂ. ಕಡಿತ, ಪ್ರತಿ ಕ್ಯಾರೆಟ್ ವಜ್ರಾಭರಣಗಳ ಖರೀದಿಯಲ್ಲಿ ೫೦೦೦ ರೂ. ಹಾಗೂ ಪ್ರತಿ ಕೆಜಿ ಬೆಳ್ಳಿ ಆಭರಣಗಳ ಖರೀದಿಗೆ ೩೦೦೦ ರೂ. ನೇರ ರಿಯಾಯಿತಿ ನೀಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶೇ.೧೦೦ ಬಿಎಎಸ್ ಹಾಲ್ ಮಾರ್ಕ್ ಹೊಂದಿರುವ ಶುದ್ಧ ಚಿನ್ನ, ನ್ಯಾಯೋಜಿತ ತಯಾರಿಕಾ ವೆಚ್ಚ, ಸಂಪೂರ್ಣ ಪಾರದರ್ಶಕತೆಯ ಬಿಲ್ಲಿಂಗ್, ಸಿಬ್ಬಂದಿ ನಗುಮೊಗದ ಸೇವೆ, ಖರೀದಿಯ ಬಳಿಕವೂ ವಸ್ತುಗಳ ಮೇಲೆ ಉತ್ತಮ ಸೇವೆ ಹಾಗೂ ಚಿನ್ನದ ಪರಿಶುದ್ಧತೆಯನ್ನು ಪರೀಕ್ಷಿಸಲು ಸ್ಪೆಕ್ರ್ಟಾಮೀಟರ್ ಸಹ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.