ದ. ಕ ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆ ಹಾಗೂ ಬಳಕೆ ಬಗ್ಗೆ ಮಾಹಿತಿ ಹಾಗೂ ವಿಶೇಷ ಗ್ರಾಮ ಸಭೆ ಶ್ರೀಮತಿ ಸುಮತಿ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜುಲೈ 15 ರಂದು
ನಡೆಯಿತು .















ದ. ಕ ಜಿಲ್ಲಾಪಂಚಾಯತ್ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖಾಧಿಕಾರಿ ಸುರೇಶ್ ಮಾತನಾಡಿ ಕುಡಿಯುವ ನೀರಿನ ಯೋಜನೆ, ಜಾರಿ ಬಳಕೆ ಕುರಿತು ಮಾಹಿತಿ ಹಾಗೂ ಮೀಟರ್ ಆಧಾರದಲ್ಲಿ ಎಷ್ಟು ನೀರನ್ನು ಪ್ರತಿ ಮನೆಗೆ ತಲುಪಿಸುವ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.ನೋಡೆಲ್ ಅಧಿಕಾರಿಯಾಗಿ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಸಹಾಯಕರಾದ ಚೈತ್ರಾ ಮಾಹಿತಿ ನೀಡಿದರು. ಗ್ರಾಂ .ಪಂ ಅಭಿವೃದ್ಧಿ ಅಧಿಕಾರಿ ಸರಿತಾ ವೋಲ್ಗಾ ಡಿ ಸೋಜಾ ಕುಡಿಯುವ ನೀರಿನ ಬಳಕೆಯ ಬಗ್ಗೆ ಸರಕಾರ ಮನೆಗಳಿಗೆ ನಿಗದಿಪಡಿಸಿದ ಹಾಗೂ ಪಾವತಿಸಬೇಕಾದ ದರದ ಬಗ್ಗೆ ಮಾಹಿತಿ ನೀಡಿದರು. ಮೀಟರ್ ಸರಿಪಡಿಸುವ ಬಗ್ಗೆ. ಕೆಲವು ಕಡೆಗಳಲ್ಲಿ ಮೀಟರ್ ಬ್ಲಾಕ್ ಆಗಿರುವ ಬಗ್ಗೆ ಪ್ರಸ್ತಾಪ ಮಾಡಿದ್ದರು ಹಾಗೂ ನೀರಿನ ನೀರಿನ ಬಿಲ್ ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸದಿದ್ದರೆ, ಕಟ್ಟಡವರ ನೀರು ಸರಬರಾಜನ್ನು ಕಡಿತಗೊಳಿಸುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಪಂಚಾಯತ್ ಸದಸ್ಯರುಗಳಾದ ಜಗದೀಶ್ ರೈ, ಶ್ರೀಮತಿ ಸುಂದರಿ ವಿಮಲಾ ಪ್ರಸಾದ್, ಸುಶೀಲಾ ಲಿಸ್ಸಿ ಮೊನಾಲಿಸಾ, ಕುಡಿಯುವ ನೀರಿನ ಸಮಿತಿಯ ನಾಗೇಶ ಪಿ. ಆರ್, ಪುಷ್ಪರಾಜ್ ರೈ ಉಪಸ್ತಿತರಿದ್ದರು .
ಕುಡಿಯುವ ನೀರು ನೈರ್ಮಲ್ಯ ಸಮಿತಿ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿ, ಗ್ರಾಂ . ಪಂ ಉಪಾಧ್ಯಕ್ಷ ಎಸ್ ಕೆ ಹನೀಫ್ ವಂದಿಸಿ, ಪಂಚಾಯತ್ ಸಿಬ್ಬಂದಿ ಹರ್ಷಿತ್ ಕಾರ್ಯಕ್ರಮ ನಿರೂಪಿಸಿದರು.










