ಸುಳ್ಯ 57 ನೇ ವರ್ಷದ ಸಾರ್ವಜನಿಕಗಣೇಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಸುಳ್ಯ ಶ್ರೀ ಸಿದ್ಧಿವಿನಾಯಕ ಸೇವಾಸಮಿತಿ,ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಇದರ ಆಶ್ರಯದಲ್ಲಿ ಅ.27 ರಿಂದ 31 ರ ತನಕ ಸುಳ್ಯ ಚೆನ್ನಕೇಶವದೇವಸ್ಥಾನದಲ್ಲಿ ನಡೆಯಲಿರುವ 57 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರವನ್ನು ಜು.16 ಸಂಕ್ರಮಣ ದಿನದಂದು ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.


ಕಲ್ಕುಡದೈವಸ್ಥಾನದ ಆಡಳಿತ ಧರ್ಮದರ್ಶಿ ಪಿ.ಕೆ ಉಮೇಶ್ ರವರು ಪ್ರಾರ್ಥಿಸಿ ಆಮಂತ್ರಣ ಪತ್ರಬಿಡುಗಡೆಗೊಳಿಸಿದರು. ದೈವಸ್ಥಾನದ ಪೂಜಾರಿ ಮೋನಪ್ಪ ಗೌಡ ಕೆರೆಮೂಲೆ, ತಿಮ್ಮಪ್ಪ ಗೌಡ ನಾವೂರು ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವತಾರಾಧನಾ ಸಮಿತಿ ಅಧ್ಯಕ್ಷ ದಿನೇಶ್ ಕುಮಾರ್ ಕೆ.ಸಿ, ಧರ್ಮದರ್ಶಿ ಮಂಡಳಿಯ ಸದಸ್ಯರಾದ ಪ್ರಕಾಶ್ ಹೆಗ್ಡೆ, ಸೋಮನಾಥ ಪೂಜಾರಿ, ಚಂದ್ರಶೇಖರ ಸೆಂಚುರಿ, ಕೇಶವ ನಾಯಕ್, ಹರೀಶ್ ಬೂಡುಪನ್ನೆ, ಸತ್ಯ ಪ್ರಸಾದ್ ಹಾಗೂ ಸಮಿತಿಯಪದಾಧಿಕಾರಿಗಳಾದ ಭರತ್ ಪಿ.ಯು, ಗುರುದತ್ ಶೇಟ್, ಶ್ರೀಮತಿ ಕಿಶೋರಿ ಶೇಟ್, ಜಿ.ಜಿ.ನಾಯಕ್, ಗಿರೀಶ್ ಕಲ್ಲುಗದ್ದೆ, ಚಂದ್ರಶೇಖರ ಅಡ್ಪಂಗಾಯ,ಮಧುಸೂದನ್, ಶ್ರೀಮತಿ ಲತಾ ಮಧುಸೂದನ್, ಶಿವರಾಮ ಕೇರ್ಪಳ, ಬೆಳ್ಯಪ್ಪ ಗೌಡ ಬೀರಮಂಗಲ,ಶ್ರೀಮತಿ ಮಮತಾ ಕೈಲಾಸ್ ಶೆಣೈ, ಶ್ರೀಮತಿ ಲತಾ ಪ್ರಕಾಶ್ ಹೆಗ್ಡೆ, ಜ್ಞಾನೇಶ್ವರ ಶೇಟ್, ಶೀನಪ್ಪ ಬಯಂಬು, ಸೋಮನಾಥ ಕೇರ್ಪಳ, ಅಪ್ಪು ಪಾಟಾಳಿ ಆಡಿಂಜ,ನಾರಾಯಣ ಶಾಂತಿನಗರ, ವಿಶ್ವನಾಥ ಹಳೆಗೇಟು, ಮಹಾಬಲ ರೈ ಆಲೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.