ಅಡ್ಪಂಗಾಯ ಸ.ಹಿ.ಪ್ರಾ. ಶಾಲೆಯಲ್ಲಿ ಪೌಷ್ಟಿಕ ವನ ನಿರ್ಮಾಣಕ್ಕೆ ಶ್ರಮದಾನ

0

ಅಡ್ಪಂಗಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಶಾಲಾ ಎಸ್ ಡಿ ಎಂ ಸಿ ಸಮಿತಿಯವರು, ಪೋಷಕ ವೃಂದ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಪೌಷ್ಟಿಕವನ ನಿರ್ಮಾಣಕ್ಕೆ ಜು 16 ರಂದು ಶ್ರಮದಾನ ಮೂಲಕ ಪ್ರಾರಂಭಿಸಲಾಯಿತು.

ಈ ಸಂಧರ್ಭದಲ್ಲಿ ಸದಸ್ಯರುಗಳಾದ ಇಲ್ಯಾಸ್ ಎಂ,ವಸಂತ,ಶೀನ,ಶೋಭಾಅಡ್ಪಂಗಾಯ,ಪೋಷಕರಾದ ವಿಜಯ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಪ್ರ.ಕಾರ್ಯದರ್ಶಿ ವಿನೋದ್ ಮಾವಿನಪಳ್ಳ ಮೊದಲಾದವರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.

ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಬ್ಬಾಸ್ ಎ. ಬಿ ಮತ್ತು ಅಧ್ಯಾಪಕ ವೃಂದದವರು ಸಹಕರಿಸಿದರು.