ಕೊಡಪಾಲ, ಬಾಳೆಗುಂಡಿ ಭಾಗದಲ್ಲಿರುವ ಕಾಡನೆಗಳು

0

ರಾತ್ರಿಯಾಗುತ್ತಲೇ ಕೃಷಿ ತೋಟಕ್ಕೆ ನುಗ್ಗಿ ಹಾನಿ – ಸಾರ್ವಜನಿಕರಲ್ಲಿ ಆತಂಕ

ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿ ಭೇಟಿ

ಕಳೆದ ಕೆಲ ಸಮಯಗಳಿಂದ ರೆಂಜಾಳ, ಬಾಜಿನಡ್ಕ, ಉಬರಡ್ಕ, ಮೈರಾಜೆ ಭಾಗದಲ್ಲಿದ್ದ ಕಾಡನೆಗಳ ಹಿಂಡು ನಿನ್ನೆ(ಜು. 15) ರಾತ್ರಿ ಕೊಡಪಾಲದ ಕೃಷಿ ತೋಟಕ್ಕೆ ನುಗ್ಗಿವೆ.

ಕೊಡಪಾಲದ ಡಾ. ಶ್ರೀ ರಾಮ್ ಭಟ್, ಸತ್ಯನಾರಾಯಣ ಭಟ್, ಸುಬ್ರಹ್ಮಣ್ಯ ಭಟ್, ಚಂದ್ರಶೇಖರ ಭಟ್, ರಾಜಶೇಖರ ಭಟ್, ಜಯ ಕೊಡಪಾಲರವರ ತೋಟಕ್ಕೆ ನುಗ್ಗಿ, ಬಾಳೆ, ತೆಂಗು ಹಾಗೂ ಅಡಿಕೆ ಗಿಡಗಳಿಗೆ ಹಾನಿ ಮಾಡಿವೆ.

ನಂತರ ಬಾಳೆಗುಂಡಿ ಭಾಗಕ್ಕೆ ತೆರಳಿರುವ ಕಾಡಾನೆಗಳು ಆ ಭಾಗದ ಕಾಡಿನಲ್ಲಿ ಇವೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಉಪವಲಯರಣ್ಯಧಿಕಾರಿ ಸೌಮ್ಯ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಈ ಭಾಗದ ಸಾರ್ವಜನಿಕರು ಜಾಗ್ರತೆ ವಹಿಸುವಂತೆ ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.