ಕೊಡಿಯಾಲ : ಟೆಂಡರು ಪಡೆದು ಅರಣ್ಯ ಇಲಾಖೆಯ ಮರ ಸಾಗಾಟ

0

ರಸ್ತೆ ಹಾಳಾಗುತ್ತದೆಂದು ಮರ ಸಾಗಾಟದ ಲಾರಿ ತಡೆದ ಊರವರು

ಕೊಡಿಯಾಲದಲ್ಲಿ ಅರಣ್ಯ ಇಲಾಖೆಯ ಮರಗಳನ್ನು ಟೆಂಡರು ಪಡೆದು ಸಾಗಾಟ ಮಾಡುತ್ತಿದ್ದ ಗುತ್ತಿಗೆದಾರರ ಲಾರಿಯನ್ನು ಊರವರು ತಡೆದ ಘಟನೆ ಜು.17 ರಂದು ನಡೆದಿದೆ.


ಮಳೆಗಾಲದಲ್ಲಿ ರಸ್ತೆಯಲ್ಲಿ ಮರ ಸಾಗಾಟ ಮಾಡಿದರೆ ರಸ್ತೆ ಹಾಳಾಗುತ್ತದೆ.ಈಗಾಗಲೇ ರಸ್ತೆ ಹಾಳಾಗಿ ಸರಕಾರಿ ಬಸ್ಸು ಹಾಗೂ ಇತರ ವಾಹನಗಳು ಕೊಡಿಯಾಲಕ್ಕೆ ಬರಲು ತೊಂದರೆಯಾಗಿದೆ .ಆದುದರಿಂದ ಈ ಮಳೆಗಾಲದಲ್ಲಿ ಮರ ಸಾಗಾಟ ಮಾಡಬಾರದು ಎಂದು ಲಾರಿಯನ್ನು ಊರವರು ತಡೆದಿದ್ದು ಬಳಿಕ ಸ್ಥಳಕ್ಕೆ ಪಂಚಾಯತ್ ಪಿಡಿಒ,ಅರಣ್ಯ ಇಲಾಖೆಯವರು ಬಂದು ಲೋಡು ಮಾಡಿದ ಮರವನ್ನು ಕೊಂಡೋಗುವಂತೆ ಮತ್ತು ರಸ್ತೆ ಬದಿ ಇದ್ದ ಮರಗಳನ್ನು ಮಾತ್ರ ಕೊಂಡೋಗುವಂತೆ ಹಾಗೂ ಉಳಿದ ಮರಗಳನ್ನು ಬೇಸಿಗೆ ಕಾಲದಲ್ಲಿ ಸಾಗಿಸುವಂತೆ ಮಾತುಕತೆ ನಡೆಯಿತೆಂದು ತಿಳಿದು ಬಂದಿದೆ.