ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

0

ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಸನ್ಮಾನ ಕಾರ್ಯಕ್ರಮ ಜು. 14ರಂದು ಬೆಳ್ಳಾರೆಯ ಜೆಡಿ ಆಡಿಟೋರಿಯಂ ಪೆರುವಾಜೆಯಲ್ಲಿ ನಡೆಯಿತು. ಕ್ಲಬ್‌ನ ಅಧ್ಯಕ್ಷೆ ಲI ಉಷಾ ಬಿ. ಭಟ್ MJF ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಪದಗ್ರಹಣ ಅಧಿಕಾರಿಯಾಗಿ ಜಿಲ್ಲಾ ಪ್ರಥಮ ಉಪ ರಾಜ್ಯಪಾಲರಾದ ಲI ತಾರಾನಾಥ ಕೊಪ್ಪ PMJF ಭಾಗವಹಿಸಿದ್ದರು.
ವೇದಿಕೆಯಲ್ಲಿ ರೀಜನಲ್ ಚೇರ್ ಪರ್ಸನ್ ಲI ಆನಂದ ರೈ ದೇವಿನಗರ, ಝೋನ್ ಚೇರ್ ಪರ್ಸನ್ ಲI ಜಗನ್ನಾಥ ರೈ, ಕ್ಲಬ್‌ನ ಐಪಿಪಿ ಲI ವಿಠಲ್ ಶೆಟ್ಟಿ ಪೆರುವಾಜೆ, ಕ್ಲಬ್‌ನ ಕಾರ್ಯದರ್ಶಿ ಲI ಚೇತನ್ ಡಿ. ಶೆಟ್ಟಿ, ಕೋಶಾಧಿಕಾರಿ ಲI ಈಶ್ವರ ವಾರಣಾಶಿ, ನೂತನ ಅಧ್ಯಕ್ಷ ಲ. ಯತೀಶ್ ಭಂಡಾರಿ, ನೂತನ ಕೋಶಾಧಿಕಾರಿ ಲI ಎಂ.ಕೆ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕೋಶಾಧಿಕಾರಿ ಲI ಈಶ್ವರ ವಾರಣಾಶಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಲI ಸುನಿತಾ ಮನೋಹರ್ ಲಯನ್ಸ್ ಪ್ರಾರ್ಥನೆ ಹಾಗೂ ಮುಖ್ಯ ಅತಿಥಿ ಲI ತಾರಾನಾಥ ಕೊಪ್ಪ ಅವರನ್ನು ಸಭೆಗೆ ಪರಿಚಯಿಸಿದರು. ಲI ಭವಾನಿ ವಿ. ಶೆಟ್ಟಿ ಧ್ವಜವಂದನೆ ವಾಚಿಸಿ, ಲಯನ್ ನೀತಿ ಸಂಹಿತೆಯನ್ನು ಲI ಎಂ.ಕೆ. ಶೆಟ್ಟಿ ವಾಚಿಸಿದರು. ಕ್ಲಬ್ ಗೆ ನೂತನವಾಗಿ ಸೇರ್ಪಡೆಗೊಂಡ ಸದಸ್ಯರನ್ನು ಲI ಸುನೀತಾ ಮನೋಹರ್ ಮತ್ತು ಲI ಆಶಾ ಸಿ. ರೈಯವರು ಪರಿಚಯಿಸಿ, ನೂತನ ಪದಾಧಿಕಾರಿಗಳನ್ನು ಲI ಚಂದ್ರಹಾಸ ರೈ ಪುಡ್ಕಜೆ ಪರಿಚಯಿಸಿದರು.

ನೂತನ ಅಧ್ಯಕ್ಷ ಸ್ಥಾನ ವಹಿಸಿದ ಲI ಯತೀಶ್ ಭಂಡಾರಿ ಅಧ್ಯಕ್ಷಿಯ ಮಾತುಗಳನ್ನಾಡಿದರು. 2025/26 ನೇ ಸಾಲಿನ ನೆನಪಿಗಾಗಿ ಸದಸ್ಯರ ವತಿಯಿಂದ ದೀಪವನ್ನು ಕ್ಲಬ್ ಗೆ ಕೊಡುಗೆ ನೀಡಲಾಯಿತು. ಆರ್ಯಭಟ ಪ್ರಶಸ್ತಿ ಪುರಸ್ಕೃತರಾದ ಜೆ.ಸಿ. ಪ್ರಮೋದ್ ಕುಮಾರ್ ರೈ ಪೆರುವಾಜೆ ಅವರನ್ನು, ಶೈಕ್ಷಣಿಕ ಸಾಧನೆ ಮಾಡಿದ ಡಾI ರಶ್ಮಿ, ಅರ್ಪಣ್ ರೈ ಹಾಗೂ ಸೃಜನ್ ರನ್ನು ಸನ್ಮಾನಿಸಲಾಯಿತು. ಇವರ ಪರಿಚಯವನ್ನು ಲI ರಕ್ಷಿತ್ ಪೆರುವಾಜೆ ಮಾಡಿದರು. ಅಧ್ಯಕ್ಷೆ ಲI ಉಷಾ ಬಿ ಭಟ್ ತಮ್ಮ ಅವಧಿಯಲ್ಲಿ ಸಹಕಾರ ನೀಡಿದ ಸದಸ್ಯರಿಗೆ ಸ್ಮರಣಿಕೆ ನೀಡಿ ಅಭಿನಂದನೆ ಸಲ್ಲಿಸಿದರು. ಮುಖ್ಯ ಅತಿಥಿ ಲI ತಾರನಾಥ್ ಮತ್ತು ನಿರ್ಗಮಿತ ಪಿ.ಎಸ್.ಟಿ.ಗಳನ್ನು, ವೇದಿಕೆಯಲ್ಲಿದ್ದ ಅತಿಥಿಗಳನ್ನು ಸ್ಮರಣಿಕೆ ನೀಡಿ ಕ್ಲಬ್ ವತಿಯಿಂದ ಗೌರವಿಸಲಾಯಿತು. ಲಯನ್ಸ್ ಸ್ಥಳೀಯ ಪ್ರಾಂತ್ಯಗಳ ಪದಾಧಿಕಾರಿಗಳು, ಸದಸ್ಯರು, ರೋಟರಿ ಹಾಗೂ ಜೇಸಿ ಸಂಸ್ಥೆಯ ಪದಾಧಿಕಾರಿಗಳು, ಕ್ಲಬ್ ಸದಸ್ಯರು ಲಯನ್ಸ್ ಸಭೆಯಲ್ಲಿ ಉಪಸ್ಥಿತರಿದ್ದರು. ಡಿಸ್ಟ್ರಿಕ್ಟ್ ಪಿ.ಆರ್.ಒ ಲI ಸುದರ್ಶನ್ ಪಡಿಯಾರ್, ಡಿಸ್ಟ್ರಿಕ್ಟ್ ಕೋರ್ಡಿನೇಟರ್ ಲI ವೆಂಕಟೇಶ್ ಹೆಬ್ಬಾರ್, ಆರ್.ಸಿ ಲI ಆನಂದ ರೈ, ಝೆಡ್.ಸಿ ಲI ಜಗನ್ನಾಥ ರೈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕ್ಲಬ್‌ನ ಕಾರ್ಯದರ್ಶಿ ಲI ಚೇತನ್ ಡಿ. ಶೆಟ್ಟಿ ವಂದನಾರ್ಪಣೆಗೈದರು. ಲI ಈಶ್ವರ ವಾರಣಾಶಿ ಕಾರ್ಯಕ್ರಮ ನಿರೂಪಿಸಿದರು.

2024-25ನೇ ಸಾಲಿನಲ್ಲಿ ಕ್ಲಬ್ ಸಂದ ವಿವಿಧ ಜಿಲ್ಲಾ ಪ್ರಶಸ್ತಿಗಳು

ಲಯನ್ಸ್ ಜಿಲ್ಲೆಯ, 5 ವರ್ಷದೊಳಗಿನ ಕ್ಲಬ್‌ಗಳಲ್ಲಿ ಪ್ರಥಮ 10 ಕ್ಲಬ್‌ಗಳ ಪಟ್ಟಿಯಲ್ಲಿ ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ 4ನೇ ಸ್ಥಾನ ದೊಂದಿಗೆ, ಒಟ್ಟು 17 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.