ಲಯನ್ಸ್ ಕ್ಲಬ್ ಪಂಜ ಮತ್ತು ನಿಸರ್ಗ ಇಕೋ ಕ್ಲಬ್ ಇದರ ಆಶ್ರಯದಲ್ಲಿ ವನಮಹೋತ್ಸವ ಮತ್ತು ಹಣ್ಣಿನ ಗಿಡಗಳ ವಿತರಣಾ ಕಾರ್ಯಕ್ರಮ ಜುಲೈ 18 ರಂದು ಪಂಜ ಪದವಿಪೂರ್ವ ಕಾಲೇಜು ನಲ್ಲಿ ನಡೆಯಿತು.









ಪಂಜ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಶ್ರೀಮತಿ ಸಂಧ್ಯಾ ಕಾರ್ಯಕ್ರಮ ಉದ್ಘಾಟಿಸಿ ವನಮಹೋತ್ಸವ ಆಚರಣೆಯ ಮಹತ್ವ ವಿವರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಚಿದಾನಂದ . ಕೆ, ಫ್ರೌಡ ಶಾಲಾ ಮುಖ್ಯ ಶಿಕ್ಷಕ ದೇವಿಪ್ರಸಾದ್ , ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಲ| ಸುಚಿನ್ನ ಕಾಣಿಕೆ, ನಿಕಟಪೂರ್ವಧ್ಯಕ್ಷ ಲ| ಶಶಿಧರ ಪಳಂಗಾಯ, ನಿರ್ದೇಶಕ ಲ| ಆನಂದ ಗೌಡ ಜಳಕದಹೊಳೆ, ಕೋಶಾಧಿಕಾರಿ ಲ| ವಾಸುದೇವ ಮೇಲ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲ| ಸುರೇಶ್ ಕುಮಾರ್ ನಡ್ಕ ವೇದಿಕೆಗೆ ಆಹ್ವಾನಿಸಿದರು, ಲ| ನಾಗೇಶ್ ಕಿನ್ನಿಕುಮ್ರಿ ಅಧ್ಯಕ್ಷತೆ ವಹಿಸಿದ್ದರು ಕಾರ್ಯದರ್ಶಿ ಕರುಣಾಕರ ಎಣ್ಣೆಮಜಲು ವಂದಿಸಿದರು. ಸುಮಾರು 150 ಗೇರು ಗಿಡಗಳನ್ನು ಶಾಲಾ ಆವರಣದಲ್ಲಿ ನಡೆಲು ಲ| ಸುಚಿನ್ನ ಕಾಣಿಕೆ ಪ್ರಾಯೋಜಕತ್ವದಲ್ಲಿ ನೀಡಲಾಯಿತು.

ಹಣ್ಣಿನ ಗಿಡಗಳನ್ನು ಸಾನಿಕ ನರ್ಸರಿಯ ಮಾಲಿಕರದ ದಯಾಪ್ರಸಾದ್ ಚೀಮುಳ್ಳು ಇವರು ನೀಡಿದರು. ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತವಾಗಿ ಹಣ್ಣಿನ ಗಿಡ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್ಲಾ ಲಯನ್ಸ್ ಸದಸ್ಯರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.










