ಬ್ಯಾಂಕ್ ಆಫ್ ಬರೋಡಾ ಸುಳ್ಯ ಶಾಖೆಯಲ್ಲಿ ಸಂಸ್ಥಾಪನ ದಿನ ಆಚರಣೆ

0

ಬ್ಯಾಂಕ್ ಆಫ್ ಬರೋಡಾದ 118ನೇ ಸಂಸ್ಥಾಪನ ದಿನವನ್ನು ಸುಳ್ಯ ಶಾಖೆಯಲ್ಲಿ ಜು.19ರಂದು ಆಚರಿಸಲಾಯಿತು.

ಸುಳ್ಯ ಆರಕ್ಷಕ ಠಾಣೆಯ ಎ.ಎಸ್ಐ ಉದಯಕುಮಾರ್, ವಿಜಯ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಜನಾರ್ಧನ ಕೊಳೊಂಜಿರೋಡಿ, ಗ್ರಾಹಕರಾದ ರಮೇಶ್ ಬೈಪಡಿತ್ತಾಯ, ಕೃಷ್ಣಯ್ಯ ನಾಯ್ಕ ಕೊಡಿಯಾಲಬೈಲುರವರು ಬ್ಯಾಂಕಿನ ಸ್ಥಾಪಕರ ಭಾವಚಿತ್ರದ ಎದುರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ವೆಂಕಪ್ಪ ನೆಕ್ರಾಜೆ, ಬಾಲಕೃಷ್ಣ ಪೂಜಾರಿ ಸೇರಿದಂತೆ ಅನೇಕ ಗ್ರಾಹಕರುಉಪಸ್ಥಿತರಿದ್ದರು.

ಸುಳ್ಯ ಶಾಖಾ ಉಪ ವ್ಯವಸ್ಥಾಪಕಿ ಶ್ರೀಮತಿ ಲೀನಾ ಎಲ್ಲರನ್ನು ಸ್ವಾಗತಿಸಿದರು. ಬ್ಯಾಂಕಿನ ಸಿಬ್ಬಂದಿ ಶ್ರೀಮತಿ ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಯಶೋಧ ವಂದಿಸಿದರು. ಶಾಖಾ ಸಿಬ್ಬಂದಿಗಳು ಸಹಕರಿಸಿದರು.