ಸ. ಹಿ ಪ್ರಾ ಶಾಲೆ ವಳಲಂಬೆ ಇಲ್ಲಿನ ವಿದ್ದಾರ್ಥಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುತ್ತಿಗಾರು- ವಳಲಂಬೆ ಇದರ ವತಿಯಿಂದ ಪರಿಸರ ಜಾಗೃತಿಯ ಕಾರ್ಯಕ್ರಮವನ್ನು ಜು.23 ರಂದು ಹಮ್ಮಿಕೊಳ್ಳಲಾಯಿತು.









ಶಾಲೆಯ ಎಲ್ಲಾ ತರಗತಿವಾರು ವಿದ್ಯಾರ್ಥಿಗಳಿಗೆ ಪರಿಸರಕ್ಕೆ ಸಂಬಂಧಪಟ್ಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಿದರು.
ಗುತ್ತಿಗಾರು ಗ್ರಾ. ಪಂ. ಅಧ್ಯಕ್ಷರಾದ ಶ್ರೀಮತಿ ಸುಮಿತ್ರ ಮೂಕಮಲೆಯವರು ಹಣ್ಣಿನ ಗಿಡ ನೆಡುವುದರ ಮೂಲಕ ಗಿಡ ನೆಡುವುದಕ್ಕೆ ಚಾಲನೆ ನೀಡಿದರು. ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಳಲಂಬೆ ಒಕ್ಕೂಟದ ಮಾಜಿ ಅಧ್ಯಕ್ಷ ವಿಶ್ವನಾಥ ಹೊಸೋಳಿಕೆಯವರು ವಹಿಸಿದ್ದರು. ಅತಿಥಿಗಳಾಗಿ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಕಲಾವತಿ ಮೊಟ್ಟೆ ಮನೆ, ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಶ್ರೀಮತಿ ನಳಿನಾಕ್ಷಿ, ಶಾಲಾ ಮುಖ್ಯ ಗುರುಗಳಾದ ಕು| ತೃಪ್ತಿ, ಒಕ್ಕೂಟದ ಕಾರ್ಯದರ್ಶಿಯಾದ ಪಿ ಎಸ್ ಜಗದೀಶ ಪೈಕ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಲೋಕೇಶ್ವರ ಡಿ.ಆರ್ , ಸೇವಾಪ್ರತಿನಿಧಿಯಾದ ಶ್ರೀಮತಿ ಲೋಕೇಶ್ವರಿ, ಶಾಲಾ ಪೋಷಕರು ಶಿಕ್ಷಕ ವೃಂದ ಹಾಗೂ ಪ್ರಗತಿಬಂಧು ಮತ್ತು ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ಪ್ರಾಸ್ತಾವಿಕ ನುಡಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಅಧಿಕಾರಿಯವರಾದ ರಮೇಶ್ ಮಾಡಿದರು.










