ಲಕ್ಷ ರೂಪಾಯಿ
ವೆಚ್ಚದ ಬೀದಿ ದೀಪ
ಉರಿಯುತ್ತಿಲ್ಲ ಯಾಕೆ…?
ಸುಳ್ಯ ನಗರದ ಹೃದಯ ಭಾಗವಾಗಿರುವ ಕೆ. ಎಸ್. ಆರ್. ಟಿ.ಸಿ ಬಸ್
ನಿಲ್ದಾಣದಲ್ಲಿ ಅಳವಡಿಸಲಾಗಿರುವ ಹೈ ಮಾಸ್ಟ್ ದೀಪ ಕಳೆದ ಕೆಲ ದಿನಗಳಿಂದ ಉರಿಯುತ್ತಿಲ್ಲ.
















ನಗರ ಪಂಚಾಯತ್ ವತಿಯಿಂದ
ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಅಳವಡಿಸಿದ ದೀಪವಿದ್ದು ರಾತ್ರಿ ಸಮಯದಲ್ಲಿ ಪರಿಸರದಲ್ಲಿ ಕತ್ತಲು ಕವಿದಿದೆ. ಇದರಿಂದ
ರಾತ್ರಿ ವೇಳೆಯಲ್ಲಿ ಬಸ್ಸಿನಲ್ಲಿ ಬಂದಿಳಿದ ಪ್ರಯಾಣಿಕರು ಕತ್ತಲು ಕವಿದ ವಾತಾವರಣದಲ್ಲಿ ನಡೆದಾಡಬೇಕಾದ ಪರಿಸ್ಥಿತಿ ಇದೆ.ಸರಕಾರ ಅಥವಾ ಸ್ಥಳೀಯಾಡಳಿತ ಯಾವುದೇಸಾರ್ವಜನಿಕ ಉಪಯುಕ್ತ ಯೋಜನೆಗಳನ್ನು ಅಳವಡಿಸಿದ ಮೇಲೆ ಊಟಕಿಲ್ಲದ ಉಪ್ಪಿನ ಕಾಯಂತಾಗಬಾರದು.
ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿ ಗಳು ಕ್ರಮವಹಿಸಿ ದುರಸ್ತಿ ಕಾರ್ಯ ಮಾಡುವ ಮೂಲಕ ಬೆಳಕಿನ ವ್ಯವಸ್ಥೆ ಮಾಡುವಂತಾಗಬೇಕು ಎಂದು ನಾಗರಿಕರು ಅಗ್ರಹಿಸಿರುತ್ತಾರೆ.










