ಸ್ನಾನ ಘಟ್ಟ ಮುಳುಗಡೆ

ಭಾರಿ ಮಳೆಯಿಂದಾಗ ಸುಬ್ರಹ್ಮಣ್ಯದ ಕುಮಾರಧಾರ ಬಳಿ ಜು.26 ರ ಸಂಜೆಯಿಂದ ಪಂಜ ರಸ್ತೆ ಬ್ಲಾಕ್ ಆಗಿರುವುದಾಗಿ ತಿಳಿದು ಬಂದಿದೆ.









ಸಂಜೆ ವೇಳೆ ಸುಬ್ರಹ್ಮಣ್ಯದಲ್ಲಿ ಮತ್ತು ಘಟ್ಟ ಪ್ರದೇಶದಲ್ಲಿ ಸುರಿದ ಭಾರಿ ಮಳೆಗೆ ಭಾರಿ ಪ್ರಮಾಣದ ನೀರು ಹರಿದು ಬಂದಿದ್ದು ಕುಮಾರಧಾರ ಸ್ನಾನ ಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಅಲ್ಲದೆ ಪಂಜ ಕಡೆ ಬರುವ ರಸ್ತೆಯೂ ಕುಮಾರಧಾರ ನದಿಯ ನೀರು ಆವರಿಸಿ ರಸ್ತೆ ಬ್ಲಾಕ್ ಆಗಿದೆ. ಭದ್ರತಾ ಸಿಬ್ಬಂದಿಗಳು ಸ್ಥಳದಲ್ಲಿ ನಿಯೋಜಿಸಿ ಎಚ್ಚರ ವಹಿಸಲಾಗಿದೆ.











