
ಪಂಜ ಪರಿಸರದ ಸಾರ್ವಜನಿಕರ ಪರವಾಗಿ ಪಂಜ ಗ್ರಾಮ ಪಂಚಾಯತ್, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ
ಕಳೆದ 13 ವರ್ಷಗಳಿಂದ ಪಂಜ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಜನಮೆಚ್ಚಿದ ವೈದ್ಯಾಧಿಕಾರಿಗಳಾದ ಡಾ| ಮಂಜುನಾಥ ಸಿ ಇವರಿಗೆ ಸನ್ಮಾನ ಸಮಾರಂಭ ಜು 30
ರಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಉತ್ಕರ್ಷ ಸಭಾಭವನದಲ್ಲಿ ನಡೆಯಿತು.















ಹಿರಿಯ ವೈದ್ಯರಾದ ಡಾ.ರಾಮಯ್ಯ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ
“ಸರಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ,ಜಾಷದ ಸೇವೆ ದೊರೆಯುತ್ತದೆ ಎಂದು ಜನರಿಗೆ ತೋರಿಸಿ ಕೊಟ್ಟ ಜನಪ್ರಿಯ ವೈದ್ಯ ಡಾl ಮಂಜುನಾಥರು. “ಎಂದು ಹೇಳಿದರು.

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸುಬ್ರಹ್ಮಣ್ಯ ಕುಳ ಅಭಿನಂದನಾ ಭಾಷಣ ಮಾಡಿ ” ತನ್ನ ಕೈಯಿಂದ ಹಣ ಕೊಟ್ಟು ಬಡವರಿಗೆ ಜಾಷದ ತರಿಸಿ ಕೊಟ್ಟ , ಅತ್ಯಂತ ಸೌಮ್ಯ ಸ್ವಭಾವದ ವಿಶೇಷ ವೈದ್ಯ ಡಾlಮಂಜುನಾಥರು. ವೈದ್ಯೋ ನಾರಾಯಣ ಹರಿ: ಎಂಬ ಮಾತು ಅಕ್ಷರಶಃ ನಮ್ಮ ಡಾಕ್ಟರ್ ಮಂಜುನಾಥರಿಗೆ ಸಲ್ಲುತ್ತದೆ. ಜನಸಾಮಾನ್ಯರ ಡಾಕ್ಟರ್ ಎನ್ನುವ ಪದಕ್ಕೆ ಅವರ ಸೇವೆ ನಡುವಳಿಕೆಗಳು ಪ್ರತ್ಯಕ್ಷ ಸಾಕ್ಷಿ.ಸಿಟ್ಟು ಕೋಪ ಎನ್ನುವ ಶಬ್ದಗಳು ಡಾಕ್ಟರ್ ಮಂಜುನಾಥರ ಶಬ್ದಕೋಶದಲ್ಲಿಯೇ ಇಲ್ಲ. ಎಂದು ಹೇಳಿದರು.
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ
” ಡಾ.ಮಂಜುನಾಥರು ಕಳೆದ 13 ವರುಷಗಳಿಂದ ಬಡವ, ಶ್ರೀಮಂತ ಎನ್ನದೇ ಎಲ್ಲರನ್ನೂ ಒಂದೇ ರೀತಿ ಕಂಡಿದ್ದಾರೆ. ಪಂಜದ ಆಸ್ಪತ್ರೆಗೆ ಅವರು ಬಂದ ಮೇಲೆ.
ಚಿಕಿತ್ಸೆ, ಔಷಧಕ್ಕೆ ಬಹಳ ಹೆಚ್ಚು ಜನ ಬರುತ್ತಿದ್ದಾರೆ. ಜನರ ಆರೋಗ್ಯ ರಕ್ಷಣೆಯ ಸೇವೆಯೊಂದೇ ಆವರ ಕೆಲಸ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ ಹಾಗೂ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಅಭಿವೃದ್ಧಿ ಅಧಿಕಾರಿ ಜಯಂತ್ ಯು ಬಿ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸದಾನಂದ ಕಾರ್ಜ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಆನಂದ ಗೌಡ ಕಂಬಳ,ಕೆ.ಕೃಷ್ಣ ವೈಲಾಯ, ಶಿವರಾಮಯ್ಯ ಕರ್ಮಾಜೆ, ಗ್ರಾ.ಪಂ. ಮಾಜಿ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನಾರಾಯಣ ಕೃಷ್ಣನಗರ ಸ್ವಾಗತಿಸಿದರು. ಜಯರಾಮ ಕಲ್ಲಾಜೆ ನಿರೂಪಿಸಿದರು.ಸದಾನಂದ ಕಾರ್ಜ ವಂದಿಸಿದರು.










