
ಕರ್ನಾಟಕ ರಾಜ್ಯದಾದ್ಯಂತ ಮಾಜೀ ಸಚಿವರೂ ಹಾಲೀ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯಕುಮಾರ್ ಸೊರಕೆ ಅವರ ನೇತ್ರತ್ವದಲ್ಲಿ ಎ.ಐ.ಸಿ.ಸಿ.ಯ ಹಾಗೂ ಕೆ.ಪಿ.ಸಿ.ಸಿಯ ನಿರ್ದೇಶನದಂತೆ.ರಾಜ್ಯದ ಪ್ರತೀ ಜಿಲ್ಲೆಗಳ ಕಾಂಗ್ರೆಸ್ ಪ್ರಚಾರ ಸಮಿತಿಯನ್ನು ತಯಾರು ಮಾಡಿ ಪ್ರಚಾರಕ್ಕೆ ಚುರುಕು ಮುಟ್ಟಿಸುವ ಕಾರ್ಯವು ನಡೆಯುತ್ತಿದೆ.ಇದರಂತೆ ರಾಜ್ಯ ಪ್ರಚಾರ ಸಮಿತಿಯಿಂದ ವಿವಿಧ ಜಿಲ್ಲೆಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಿದ್ದು ಇತ್ತೀಚೆಗಷ್ಟೆ ಎ.ಐ.ಸಿ.ಸಿ ಯಿಂದ ಕರ್ನಾಟಕ ಪ್ರದೇಶ್ ಕಾಂಗ್ರೆಸ್ಸಿನ ರಾಜ್ಯ ಸಮಿತಿಯ ಮುಖ್ಯ ಸಂಯೋಜಕರಾಗಿ ಬಡ್ತಿಪಡೆದು ಕೋಲಾರ ಜಿಲ್ಲೆಗೆ ಉಸ್ತುವಾರಿ ಯಾಗಿ ನೇಮಕಗೊಂಡ ಕೆ.ಪಿ ಜಾನಿ ಯವರಿಂದ ಕೋಲಾರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮುಂಚೂಣಿ ಘಟಕಗಳ ನಾಯಕರ ಪ್ರಥಮ ಬೇಟಿ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ನೂತನ ಪ್ರಚಾರ ಸಮಿತಿಯನ್ನು ರಚಿಸುವ ಬಗ್ಗೆ ಪೂರ್ವಭಾವೀ ಸಮಾಲೋಚನಾ ಸಭೆಯು ನಡೆಯಿತು.









ಸಭೆಯಲ್ಲಿ ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ ಹಾಗೂ ಕಾರ್ಯಾಧ್ಯಕ್ಷರಾದ ಶ್ರೀನಿವಾಸ ಮುಳುಬಾಗಿಲು ರವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಮುಂಚೂಣಿ ಘಟಕದ ನಾಯಕರು ಸ್ಥಳಿಯ ಕಾರ್ಪೊರೇಟರ್ಗಳು ಉಪಸ್ತಿತರಿದ್ದು ಸಮಾಲೋಚಾ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಜಾನಿ ಕೆ.ಪಿ ಯವರ ಜೊತೆಯಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ಎ.ಕೆ.ಇಬ್ರಾಹಿಂ.ಹಾಗೂ ಸಂಪಾಜೆ ವಲಯ ಕಾಂಗ್ರೆಸ್ ಉಪಾಧ್ಯಕ್ಷರು ಮತ್ತು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ತಾನ ಆಡಳಿತ ಸಮಿತಿಯ ನಿರ್ದೇಶಕರಾದ ವಸಂತ ಪೆಲ್ತಡ್ಕ ಉಪಸ್ತಿತರಿದ್ದರು.










