ಓಡಿಯೂರು ಶ್ರೀ ಗುರುದೇವನಂದ ಸ್ವಾಮೀಜಿಯವರ ಜನ್ಮದಿನೋತ್ಸವದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಗುತ್ತಿಗಾರು ವಲಯದ ಒಡಿಯೂರು ಗ್ರಾಮ ವಿಕಾಸ ಯೋಜನೆಯ ಕೊಲ್ಲಮೊಗ್ರ ಘಟಸಮಿತಿ ವತಿಯಿಂದ ಹಾಗೂ ಕೆವಿಜಿ ಅನುದಾನಿತ ಪ್ರೌಢಶಾಲಾಭಿವೃದ್ಧಿ ಸಮಿತಿಯಿಂದ ಕೊಲ್ಲಮೊಗ್ರ ಕೆವಿಜಿ ಅನುದಾನಿತ ಪ್ರೌಢಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.









ಈ ಕಾರ್ಯಕ್ರಮ ದಲ್ಲಿ ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ತೇಜಾವತಿ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಘಟಸಮಿತಿ ಅಧ್ಯಕ್ಷೆ ಲಲಿತ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಮೋನಿಷ, ಕೊಲ್ಲಮೊಗ್ರ ಗ್ರಾಮದ ಆಶಾಕಾರ್ಯಕರ್ತೆ ಸುಮತಿ, ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಸುರೇಶ್ ಪಿ ಕೆ ಹಾಗೂ ದೈಹಿಕ ಶಿಕ್ಷಕರು ಬಾಲಕೃಷ್ಣ ಕೆ. ಉಪಸ್ಥಿತರಿದ್ದರು.










