ಅನೇಕರನ್ನು ಬದುಕಿಸಿ ಮನೆ ಬೆಳಗಿದ ಡಾಕ್ಟರ್ :ಸವಿತಾರ ಮುಡೂರು
ನಿವೃತ್ತಿ ಬಳಿಕವೂ ಪಂಜದಲ್ಲಿ ವೈದ್ಯಕೀಯ ಸೇವೆ ನೀಡಿ: ಮಹೇಶ್ ಕುಮಾರ್ ಕರಿಕ್ಕಳ

ಪಂಜ ಆರೋಗ್ಯ ಕೇಂದ್ರದಲ್ಲಿ ಕಳೆದ 13 ವರ್ಷಗಳಿಂದ ವೈದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಜನಮೆಚ್ಚಿದ ವೈದ್ಯಾಧಿಕಾರಿಗಳಾದ ಡಾ. ಮಂಜುನಾಥ್
ಸಿ. ರವರಿಗೆ ಗೌರವಾರ್ಪಣೆ ಕಾರ್ಯಕ್ರಮ ಆ.10 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ” ಅತ್ಯಂತ ಸರಳ ಸಜ್ಜನಿಕೆಯ ಸೌಮ್ಯ ಸ್ವಭಾವದ ಜನಪ್ರಿಯ ಸರಕಾರಿ ವೈದ್ಯಡಾ. ಮಂಜುನಾಥರು” ಎಂದು ಹೇಳಿದರು.

ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ರವರು ಗೌರವಿಸಿ ಮಾತನಾಡಿ “ಡಾಕ್ಟರ್ ಮಂಜುನಾಥರು ಹಣದ ಮುಖ ನೋಡದೆ ಬಹಳಷ್ಟು ಸೌಮ್ಯ ಸ್ವಭಾವದಿಂದ ಸೇವೆ ನೀಡಿದ್ದಾರೆ. ಆರೋಗ್ಯ ಕಾಪಾಡಲು ಬಹಳಷ್ಟು ಮಾಹಿತಿ ನೀಡಿದ್ದಾರೆ. ಆರೋಗ್ಯ ಕೇಂದ್ರವನ್ನು ಉತ್ತಮ ಶುಚಿಯಾಗಿ ಇಟ್ಟುಕೊಂಡಿದ್ದಾರೆ. ನಿವೃತ್ತಿ
ನಂತರವೂ ಪಂಜದಲ್ಲಿ ವೈದ್ಯಕೀಯ ಸೇವೆ ನೀಡಿ”.ಎಂದು ಹೇಳಿದರು.
ಸಾರ್ವಜನಿಕ ಆರಾಧನಾ ಸಮಿತಿ ಅಧ್ಯಕ್ಷ ಸವಿತಾರ ಮುಡೂರು ಅಭಿನಂದನಾ ಭಾಷಣ ಮಾಡಿ.”12 ವರುಷಗಳ ಹಿಂದೆ ಇದ್ದ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರ ಈಗ ಅಜಗಜಾಂತರ ವ್ಯತ್ಯಾಸವಿದೆ. ಅಂದು ಬೆರಳೆಣಿಕೆಯ ರೋಗಿಗಳು ಬರುವುದನ್ನು ಕಾಣುತ್ತಿದ್ದೇವು. ಇಂದು ಅದೇ ಆರೋಗ್ಯ ಕೇಂದ್ರ ರೋಗಿಗಳಿಂದ ನಿತ್ಯ ತುಂಬಿ ತುಳುಕುತ್ತಿದೆ. ಇದಕ್ಕೆ ಈಗಿನ ವೈದ್ಯಾಧಿಕಾರಿ ಡಾ. ಮಂಜುನಾಥ್ ರವರು ಕಾರಣ. ಅವರು ಸರಕಾರಿ ವೈದ್ಯ ಅಹಂ ಇಲ್ಲದೆ ಸಾಮಾನ್ಯ ವ್ಯಕ್ತಿಯಾಗಿ ಎಲ್ಲರನ್ನೂ ಸಮಾನವಾಗಿ ಕಂಡು ವಿಶೇಷ ವೈದ್ಯಕೀಯ
ಸೇವೆ ನೀಡಿದ್ದಾರೆ.ಅವರು ಅನೇಕರನ್ನು ಬದುಕಿಸಿ ಮನೆ ಬೆಳಗುವ ಸೇವೆ ಸಲ್ಲಿಸಿದ್ದಾರೆ.ಒಬ್ಬ ವೈದ್ಯ ಗರಿಷ್ಠ ಎಷ್ಟು ಸೇವೆ ನೀಡಲು ಸಾಧ್ಯವಿದೆಯೋ ಅಷ್ಟು ಸೇವೆಯನ್ನು ಡಾ.ಮಂಜುನಾಥರು ನೀಡಿದ್ದಾರೆ”. ಎಂದು ಹೇಳಿದರು.









ಮುಖ್ಯ ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಗೌರವ ಸಲಹೆಗಾರ ಆನಂದ ಗೌಡ ಕಂಬಳ, ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಗೌಡ ಕುದ್ವ, ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಪ್ರಕಾಶ್ ಕಂಬಳ , ಗರಡಿ ಬೈಲು ಕಾಚುಕುಜುಂಬ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪರಮೇಶ್ವರ ಗೌಡ ಬಿಳಿಮಲೆ, ಅಳ್ಪೆ ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು- ಉಳ್ಳಾಲ್ತಿ ಮಹಿಷಂತಾಯ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕುಸುಮಾಧರ ಕರಿಮಜಲು , ವನಿತಾ ಸಮಾಜ ಅಧ್ಯಕ್ಷೆ ಶ್ರೀಮತಿ ಸುಮಾ ಕುದ್ವ , ಪಂಜ ಅರಣ್ಯ ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡ ಬೊಳ್ಳಾಜೆ , ಪಂಜ ಶ್ರೀ ಶಾರದಾಂಬಾ ಯಕ್ಷಗಾನ ಟ್ರಸ್ಟ್ ಅಧ್ಯಕ್ಷ ಬಾಲಕೃಷ್ಣ ಪುತ್ಯ , ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಿತೇಶ್ ಪಂಜದಬೈಲು , ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ JFM ವಾಚಣ್ಣ ಕೆರೆಮೂಲೆ , ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿಯ ನಿಕಟಪೂರ್ವಾಧ್ಯಕ್ಷ ನಾಗಪ್ಪ ಗೌಡ ಪಂಜದಬೈಲು , ಪಂಜ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಆಚಾರ್ಯ ಸಂಪ್ಯಾಡಿ , ಗ್ರಾಮ ಸ್ವರಾಜ್ ಸಂಚಾಲಕ ಜಿನ್ನಪ್ಪ ಅಳ್ಪೆ , ಪಂಜ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಗುರುಪ್ರಸಾದ್ ತೋಟ , ಮಹಾತ್ಮ ಗಾಂಧಿ ವಿದ್ಯಾಪೀಠ ಸಂಚಾಲಕ ಪುರುಷೋತ್ತಮ ಮುಡೂರು ,
ಕೇನ್ಯ ಸ್ನೇಹಿತರ ಕೂಟದ ಅಧ್ಯಕ್ಷೆ ಶ್ರೀಮತಿ ಶ್ಯಾಮಲ ರೈ ನೇರ್ಪು, ಪಂಬೆತ್ತಾಡಿ ಅಮೃತ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಲಲಿತ ಬಾಬ್ಲುಬೆಟ್ಟು , ಪಂಬೆತ್ತಾಡಿ ಅಕ್ಷತಾ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಧನಲಕ್ಷ್ಮಿ ಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಚಿತ್ರಕಲಾ ಬೊಳ್ಳಾಜೆ ಪ್ರಾರ್ಥಿಸಿದರು. ಡಾ.ದೇವಿಪ್ರಸಾದ್ ಕಾನತ್ತೂರ್ ಸ್ವಾಗತಿಸಿದರು. ಧರ್ಮಣ್ಣ ನಾಯ್ಕ ಗರಡಿ ಸನ್ಮಾನ ಪತ್ರ ವಾಚಿಸಿದರು. ಶ್ರೀಮತಿ ಪ್ರೀತಿ ರೈ ನಿರೂಪಿಸಿದರು.











