







ಚೆಂಬು ಸಾಹಿತ್ಯ ವೇದಿಕೆ ವತಿಯಿಂದ ಏರ್ಪಡಿಸಿದ ಏಳನೇ ವರ್ಷದ ಎಂ. ಜಿ. ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. ಸ್ಪರ್ಧೆಗೆ ಬಂದ ಮೂವತ್ತೖದು ಕವಿತೆಗಳಲ್ಲಿ ಮೂರು ಕವಿತೆಗಳನ್ನು ಬಹುಮಾನಕ್ಕಾಗಿ ಆಯ್ಕೆ ಮಾಡಲಾಗಿದೆ. ಉಳಿದ್ದೆಲ್ಲ ಸ್ಪರ್ಧೆಗೆ ಬಂದ ಕವಿತೆಗಳನ್ನು ಬರೆದವರಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ನೀಡಲಾಗುವುದು. ಕವಿತೆಗಳ
ಮೌಲ್ಯ ಮಾಪಕರಾಗಿ ಕವಯತ್ರಿ ಸ್ಮಿತಾ ಅಮೃತರಾಜ್ ಸಹಕರಿಸಿದ್ದಾರೆ. ಬಹುಮಾನದ ಪ್ರಾಯೋಜಕರಾಗಿ ಬಾರಿಯಂಡ ಜೋಯಪ್ಪ ಮತ್ತು ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಇವರು ತಲಾ ಒಂದು ಸಾವಿರದಂತೆ ನೀಡಿ ಸಹಕರಿಸಿದ್ದಾರೆ.
ಪ್ರಥಮ : ಬೊದ್ಕು ಬಾಳೆಲೆನಂಗೆ (ಜೀವನ್ ಪುರ )
ದ್ವಿತೀಯ : ಆಟಿ (ವಿಮಲಾರುಣ ಪಡ್ಡಂಬೈಲು )
ತೃತೀಯ : ನೆಂಪೇ ಬಾತ್ಲೆ (ಬಿಟ್ಟೀರ ಚೋಂದಮ್ಮ, ಬೆಂಗಳೂರು)
ತೀರ್ಪುಗಾರರ ಮೆಚ್ಚುಗೆಯ ಕವಿತೆಗಳಾಗಿ ಇದ್ದದ್ ಇಲ್ಲದ್ ( ಸೀತಾರಾಮ ಕೇವಳ), ಸತ್ತಲಿಗೆನೇ ಸಾಯಲಿ ನಾನ್ ( ಓಂಶ್ರೀ ದಯಾನಂದ), ಇದ್ ಬಾಳುವವರ ಬದ್ಕ್ (ಶಿವದೇವಿ ಅವನಿಶ್ಚಂದ್ರ), ತವರ್ ನ ಹಾಡ್ ( ಮಮತಾ ಪಡ್ಡಂಬೈಲು), ನೆನ್ಪಾದೆ ನಂಗೆ ಒಂದೊಂದೆ ( ಯೋಗೀಶ್ ಹೊಸೊಳಿಕೆ)
ಶಿಕ್ಷಣ ಬ್ರಹ್ಮ (ಎಂ. ಕೆ. ಧನಲಕ್ಷ್ಮಿ), ಮಲ್ಲಿಗೆಯ ಗೂಡೆ ( ಗೋಪಾಲ ಕೃಷ್ಣ, ಮೂಟೇರ), ಬಲಿಪಶುಗ(ಕಟ್ರತನ ಲಲಿತ), ಕಾಡ್ ಕರೆ ಕವನ( ಲೋಹಿತಾಶ್ವ ಕೊಯಿಂಗಾಜೆ), ನನ್ನರಸ ಇಂದ್ ಬಾದೋ ( ರೇಷ್ಮಾ ಮನೋಜ್ ಕುಕ್ಕನೂರು) ಮೊಡ್ಪಲೆಲಿ ಸೂರ್ಯ (ಅನನ್ಯ ಸುಬ್ರಮಣ್ಯ) ನಾನ್ ನನ್ನ ಮಗಳ್ ( ಬೃಂದ ಕುದ್ಪಾಜೆ) ಕೊಂಡಾಟಲಿ ಸಾಕಿದ ಕೂಸುನ ಬೊದ್ಕು ( ದರ್ಶನ್ ಕೋಳಿಮಾಡು)ಆಯ್ಕೆಯಾಗಿವೆ.










