







ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಆ. 17 ರಂದು ಧ್ಯಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಧ್ಯಾನ ಗುರು ಶ್ರೀಮತಿ ರೂಪ ಗುಡ್ಡoಡರವರು ಮಾತನಾಡಿ “ಧ್ಯಾನದ ಮೂಲಕ ನಮ್ಮ ಚೈತನ್ಯ ಶಕ್ತಿಯನ್ನು ಬೆಳೆಸಿಕೊಳ್ಳಬಹುದು. ಭಾರತದಲ್ಲಿ ಋಷಿ ಮುನಿಗಳ ಪರಂಪರೆಯಲ್ಲಿ ಧ್ಯಾನವು ಮುಖ್ಯವಾದ ಸಾಧನೆಯ ಮಾರ್ಗವಾಗಿತ್ತು. ಇದು ಮಕ್ಕಳಲ್ಲಿ ಏಕಾಗ್ರತೆ ಸುಪ್ತ ಶಕ್ತಿಯ ಎಚ್ಚರ ಮತ್ತು ಮನೋದೃಢತೆಗೆ ಸಹಕಾರಿಯಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ವಂದಿಸಿದರು.
ಈ ಸಂದರ್ಭದಲ್ಲಿ ಶಿಬಿರಾರ್ಥಿಗಳು ಮತ್ತು ಅವರ ಪೋಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.










