ಅಚ್ರಪ್ಪಾಡಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಅಚ್ರಪ್ಪಾಡಿ ಸ.ಕಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

ಶಾಲಾ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ವಸಂತ ಬೊಳ್ಳಾಜೆಯವರು ಧ್ವಜಾರೋಹಣಗೈದರು.

ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಧರ್ಮಪಾಲ‌ ಅಡ್ಡಣಪಾರೆ, ಉಪಾಧ್ಯಕ್ಷೆ ಸೌಮ್ಯ ಅಚ್ರಪ್ಪಾಡಿ, ಶಾಲಾ ಹಿತರಕ್ಷಣಾ ವೇದಿಕೆಯ ಉಪಾಧ್ಯಕ್ಷ ಚಂದ್ರಶೇಖರ ಅಚ್ರಪ್ಪಾಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಖಿಲ್ ಅಚ್ರಪ್ಪಾಡಿ, ಶಾಲಾ ಮುಖ್ಯ ಶಿಕ್ಷಕಿ ಹರಿಣಾಕ್ಷಿ, ಶಿಕ್ಷಕ ರಮೇಶ್, ಅಂಗನವಾಡಿ ಶಿಕ್ಷಕಿ ಸುಂದರಿ, ಮಕ್ಕಳ ಪೋಷಕರು, ಶಾಲಾ ಅಭಿಮಾನಿಗಳು ಉಪಸ್ಥಿತರಿದ್ದರು.

ಶಾಲಾ ಮಕ್ಕಳಿಗೆ ದೇಶ ಭಕ್ತಿ ಗೀತೆ, ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ಶಾಲೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಶಿಕ್ಷಕರು, ಎಸ್.ಡಿ.ಎಂ.ಸಿ ಅಧ್ಯಕ್ಷರು, ಅಡಿಗೆ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಜನಾರ್ಧನ ಅಚ್ರಪ್ಪಾಡಿ, ಝಾನ್ಸಿ , ಪ್ರವೀಣ್ ಎಚ್ ಎನ್ ಕುತ್ತಮೊಟ್ಟೆ ಮತ್ತು ಶುಭಲಕ್ಷ್ಮಿ ಬದಿಯಡ್ಕ ಸನ್ಮಾನ ಸ್ವೀಕರಿಸಿದರು.