ಶಿವಮೊಗ್ಗದಲ್ಲಿ ನಡೆದ “ಶಿವಮೊಗ್ಗ ಓಪನ್ ಆರನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್” ನಲ್ಲಿ ಸುಳ್ಯ ತಾಲೂಕು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಮನೀಶ್ ಕಾಳಪ್ಪಜ್ಜನ ಮನೆ ಮತ್ತು ಸುಳ್ಯ ತಾಲೂಕು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಗೇರು ಮಾಣಿ ಮಜಲಿನ 5ನೇ ತರಗತಿಯ ವಿದ್ಯಾರ್ಥಿ ಹರಿವಂಶ್ ಕಾಳಪ್ಪಜ್ಜನ ಮನೆ ಕನಕಮಜಲು ಇವರು ಪ್ರಶಸ್ತಿಯನ್ನು ಗಳಿಸಿಕೊಂಡಿರುತ್ತಾರೆ.

ಭಾರತೀಯ ಮೊಯಲ್ ಶೋಟೊ ಖಾನ್ ಕರಾಟೆ ಡೊ ಅಸೋಸಿಯೇಷನ್ ವತಿಯಿಂದ ಆಗಸ್ಟ್ 9 ಮತ್ತು 10ರಂದು ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿವಿಧ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಬಾಲಕರ ವಿಭಾಗದ Blue Belt ನ ಕಟಾ ವಿಭಾಗದಲ್ಲಿ ಮತ್ತು ಕುಮಿಟೆ ಯಲ್ಲಿ ಮನೀಶ್ ರ ವರು ಮತ್ತು ಗ್ರೀನ್ Belt ನ ಕಟಾ ವಿಭಾಗದಲ್ಲಿ ಮತ್ತು ಕುಮಿಟೆ ಯಲ್ಲಿ ಹರಿವಂಶದವರು ಬಹುಮಾನಗಳಿಸಿರುತ್ತಾರೆ.
ಇವರು ಕನಕ ಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕರು ಮತ್ತು ಗ್ರಾಮ ಪಂಚಾಯತ್ ಕನಕ ಮಜಲು ಇದರ ಮಾಜಿ ಸದಸ್ಯರಾದ ದಿವಾಕರ ಕಾಳಪ್ಪಜ್ಜನ ಮನೆ ಮತ್ತು ಸರಕಾರಿ ಪ್ರೌಢಶಾಲೆ ಅಜ್ಜಾವರದ ದೈಹಿಕ ಶಿಕ್ಷಣ ಶಿಕ್ಷಕಿ ಯಾದ ರೇವತಿ.ಪಿ.ಇವರ ಸುಪುತ್ರರು.








ಮತ್ತು ಮನೀಶ್ ರವರು ಆಗಸ್ಟ್ 12ರಂದು ಶಾಲಾ ಶಿಕ್ಷಣ ವತಿಯಿಂದ ಗುತ್ತಿಗಾರಿನಲ್ಲಿ ನಡೆದ ಪ್ರಾಥಮಿಕ ಬಾಲಕರ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಗಳಿಸಿಕೊಂಡಿರುತ್ತಾರೆ.
ಇವರು ಕರಾಟೆ ಗುರುಗಳಾದ ಶ್ರೀ ಚಂದ್ರಶೇಖರ ಕನಕ ಮಜಲು ಇವರ ಶಿಷ್ಯಂದಿರು.










