ಹಾಲೆಮಜಲು : ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಸನ್ಮಾನ ಕಾರ್ಯಕ್ರಮ

0


ಆದರ್ಶ ಯೂತ್ ಕ್ಲಬ್ ಹಾಲೆಮಜಲು ಇದರ ಆಶ್ರಯದಲ್ಲಿ ಆ. 17 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಸನ್ಮಾನ ಕಾರ್ಯಕ್ರಮ ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಸಭಾಭವನ ದ ಮಾಲಕರಾದ ಯತೀಂದ್ರ ಕಟ್ಟೆಕೋಡಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಸಭಾಧ್ಯಕ್ಷತೆಯನ್ನು ಕ್ಲಬ್‌ನ ಗೌರವಾಧ್ಯಕ್ಷ ಸತೀಶ್ ಬಂಬುಳಿ ವಹಿಸಿದ್ದರು. ವೇದಿಕೆಯಲ್ಲಿ ಕ್ಲಬ್‌ನ ಅಧ್ಯಕ್ಷ ಕಾರ್ಯದರ್ಶಿ ಪ್ರಜ್ವಲ್ ಕುಂಬಡ್ಕ ಉಪಸ್ಥಿತರಿದ್ದರು. ನಂತರ ಶಾಲಾ ಮಕ್ಕಳಿಗೆ ಹಾಗೂ ಹಾಲೆಮಜಲು ಪರಿಸರದ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.


ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಇತ್ತೀಚೆಗಷ್ಟೇ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ತಿರುಮಲೇಶ್ವರಿ ಯುಎಸ್ ಇವರನ್ನು ಕ್ಲಬ್‌ನ ವತಿಯಿಂದ ಕ್ಲಬ್‌ನ ಪೂರ್ವಾಧ್ಯಕ್ಷರುಗಳು ಗೌರವಿಸಿದರು. ವೇದಿಕೆಯಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಭಾರತಿ ಸಾಲ್ತಾಡಿ ಉಪಸ್ಥಿತರಿದ್ದರು. ಅತಿಥಿಗಳು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಕ್ಲಬ್ಬಿನ ಪೂರ್ವ ಅಧ್ಯಕ್ಷರುಗಳು ನಿರ್ದೇಶಕರು ಗೌರವ ಸಲಹೆಗಾರರು ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಲೋಕೇಶ್ ಪೀರನಮನೆ ಹಾಗೂ ಕು.ಕಲ್ಪನಾ ಎ.ವೈ. ಕಾರ್ಯಕ್ರಮ ನಿರೂಪಿಸಿದರು.