162 ಕೋಟಿ ವ್ಯವಹಾರ- 79.24 ಲಕ್ಷ ಲಾಭ, ಸದಸ್ಯರಿಗೆ ಶೇ.10 ಡಿವಿಡೆಂಡ್
ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯು ಆ.24 ರಂದು ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಾಲಯದ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ ಅಧ್ಯಕ್ಷತೆ ವಹಿಸಿ ಎಲ್ಲರನ್ನೂ ಸ್ವಾಗತಸಿ, ಸಂಘವೂ 162 ಕೋಟಿ ವ್ಯವಹಾರ ಹೊಂದಿದ್ದು, ರೂ. 79.24 ಲಕ್ಷ ಲಾಭ ಹೊಂದಿದೆ. ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯರು ಮಹಾಸಭೆಗೆ ಹಾಜರಾಗಬೇಕು. ಎಂದು ಹೇಳಿದರು.















ವೆಂಕಟ್ರಾಮ್ ಭಟ್ ಮತ್ತು ರತ್ನಾಕರ ಗೌಡ ಬಳ್ಳಡ್ಕ ರವರು ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದೆ. ದಿನಂಪ್ರತಿ ಆನೆಗಳು ಬಂದು ಕೃಷಿ ನಾಶ ಮಾಡುತ್ತಿದೆ. ಇದಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ಆಗ ಅಧ್ಯಕ್ಷರು ಎಲ್ಲಾ ಕೃಷಿಕರು ಸುಮಾರು 100, 200 ರಷ್ಟು ಜನ ಸೇರಿ ಸಂಬಂಧಪಟ್ಟ ಇಲಾಖೆಗೆ ಮನವಿ ಕೊಡಲು ಹೋಗುವ ಕೇವಲ 10 ಜನ ಹೋದರೆ ಆಗುವುದಿಲ್ಲ. ಇನ್ನೊಮ್ಮೆ ನಿರ್ಧಾರ ಮಾಡಿ ಎಲ್ಲರೂ ಹೋಗಿ ಮನವಿ ಕೊಡುವ ಎಂದರು.
ಈ ಸಂದರ್ಭದಲ್ಲಿ ಮರಣ ಸಾಂತ್ವನ ಹಣವನ್ನು ಸಂಘಕ್ಕೆ ಹಿಂದುರುಗಿಸಿದ ದಾನಿಗಳನ್ನು ಗೌರವಿಸಲಾಯಿತು. ವರದಿ ವರ್ಷದಲ್ಲಿ ಮೃತಪಟ್ಟ ಸದಸ್ಯರುಗಳ ಹೆಸರನ್ನು ಹೇಳಿ ಸಂತಾಪ ಸೂಚಿಸಲಾಯಿತು.
ಮರಣ ಸಾಂತ್ವನ ನಿಧಿಯ ಮೊಬಲಗು ರೂ.25000/- ವನ್ನು ಸಂಘಕ್ಕೆ ದೇಣಿಗೆ ನೀಡಿದ ಶ್ರೀಮತಿ ಸರಸ್ವತಿ ಅಮ್ಮ ಮತ್ತು ನಾರಾಯಣ ನಾಯ್ಕ ಇವರ ಸ್ಮರಣಾರ್ಥ ಗಿರೀಶ್ ಪಾಲಡ್ಕ ಮತ್ತು ಶ್ರೀಮತಿ ರತ್ನಾವತಿ ಮತ್ತು ಕುಶಾಲಪ್ಪ ಗೌಡ ಪಾನತ್ತಿಲ ಮನೆ ಇವರ ಸ್ಮರಣಾರ್ಥ ವಿನಯ ಗೌಡ ಪಾನತ್ತಿಲ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ರಾಜೇಶ್ ನೆಕ್ಕಿಲ, ನಿರ್ದೇಶಕರಾದ ಗಂಗಾಧರ ಪಿ.ಎಸ್, ಯು.ವಿ ಭಾಸ್ಕರ ರಾವ್, ಸುರೇಶ್ ಎಂ.ಎಚ್., ಹರಿಪ್ರಸಾದ್ ಪಾನತ್ತಿಲ, ವಿಜಯಕುಮಾರ್ ಉಬರಡ್ಕ, ಹರೀಶ್ ಎಂ.ಎಸ್, ಜಗದೀಶ್ ಕಕ್ಕೆಬೆಟ್ಟು, ಈಶ್ವರ ಆರ್. ಕಲ್ಚಾರ್, ಶ್ರೀಮತಿ ಲೀಲಾವತಿ ಬಿ., ಶ್ರೀಮತಿ ಶಾರದಾ ಡಿ.ಶೆಟ್ಟಿ, ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ ವಾರ್ಷಿಕ ವರದಿ ವಾಚಿಸಿದರು.
ಕು.ವಿಷ್ಣುಪ್ರಿಯ ಮತ್ತು ಕು.ವೈಷ್ಣವಿ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ರಾಜೇಶ್ ಭಟ್ ನೆಕ್ಕಿಲ ವಂದಿಸಿದರು.
ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್ ಪಡ್ಪು, ಸಿಬ್ಬಂದಿ ಶ್ರೀಮತಿ ರಮ್ಯ ಮತ್ತು ಗುರುವ ಸಹಕರಿಸಿದರು.

ಪ್ರತಿಭಾ ಪುರಸ್ಕಾರ:
ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸ.ಹಿಪ್ರಾ ಶಾಲೆ ಉಬರಡ್ಕ ಮಿತ್ತೂರು ಶಾಲೆಯಲ್ಲಿ ಪ್ರಥಮ ಸ್ಥಾನಿಯಾಗಿ ನೆಯ್ಯೋಣಿ ಮನೆ ಉಮೇಶ್ ರವರ ಪುತ್ರ ವಿಯಾಶ್ ಯು., ದ್ವಿತೀಯ ದೇರಾಜೆ ಮನೆ ಶಿವರಾಮ ಡಿ.ಎ ರವರ ಪುತ್ರ ಸುಶಾಂತ್ ಗೌಡ ಡಿ .ಎಸ್, ಸ.ಹಿ.ಪ್ರಾ.ಶಾಲೆ ಅಮೈಮಡಿಯಾರಿನಲ್ಲಿ ಪ್ರಥಮ ಸೂಂತೋಡು ಮನೆ ಸುಂದರ ರವರ ಪುತ್ರ ಕುಶಿತ್.ಎಸ್., ದ್ವಿತೀಯ ಬಡ್ಡೆಕಲ್ಲು ಮನೆ ರವಿಯವರ ಪುತ್ರಿ ರಂಜಿನಿ, ಸ.ಕಿ.ಪ್ರಾ ಶಾಲೆ ಕೊಡಿಯಾಲಬೈಲಿನ ಪ್ರಥಮ ಬೇರ್ಪಡ್ಕ ಮನೆ ರೋಹಿತ್ ರವರ ಪುತ್ರಿ ಸ್ಪರ್ಶ ಆರ್, ದ್ವಿತೀಯ ಕೊಡಿಯಾಲಬೈಲು ರಾಖೇಶ್ ಕೆ.ಎಸ್ ರವರ ಪುತ್ರಿ ಪ್ರಜಿತಾ ಕೆ.ಆರ್.










