ಮಂಡೆಕೋಲು ಗಣೇಶೋತ್ಸವ ಪ್ರಯುಕ್ತ ಕೆಸರುಗದ್ದೆ ಕ್ರೀಡಾಕೂಟ

0


ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಂಡೆಕೋಲು ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಮಂಡೆಕೋಲು ಇದರ ಆಶ್ರಯದಲ್ಲಿ ೧೮ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ ಆ.೨೭ರಂದು ಮಂಡೆಕೋಲು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ನಡೆಯಲಿದ್ದು ಆ ಪ್ರಯುಕ್ತ ಕೆಸರುಗದ್ದೆ ಕ್ರೀಡಾಕೂಟ ಆ.೨೪ರಂದು ಕಣೆಮರಡ್ಕ ಉದ್ದಾರ ಗದ್ದೆಯಲ್ಲಿ ನಡೆಯಿತು.


ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರ್ ದೀಪ ಬೆಳಗಿಸಿದರು. ಕ್ರೀಡಾಕೂಟದ ಉದ್ಘಾಟನೆಯನ್ನು ಸಾಮಾಜಿಕ ಕಾರ್ಯಕರ್ತರಾದ ಸುಬೋದ್ ಶೆಟ್ಟಿ ಮೇನಾಲ ನೆರವೇರಿಸಿದರು. ಗ್ರಾ.ಪಂ. ಅಧ್ಯಕ್ಷ ಕುಶಲ ಉದ್ದಂತಡ್ಕ, ಮಂಡೆಕೋಲು ಸಹಕಾರ ಸಂಘದ ಉಪಾಧ್ಯಕ್ಷ ಪುರುಷೋತ್ತಮ ಕಾಡುಸೊರಂಜ, ಗ್ರಾಮ ಆಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಪೆರಾಜೆ, ಮಂಡೆಕೋಲು ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಉಪಸ್ಥಿತರಿದ್ದರು.


ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಂಗಾಧರ ಮಾವಂಜಿ, ಪ್ರಧಾನ ಕಾರ್ಯದರ್ಶಿ ತಿರುಮಲೇಶ್ವರ ಕೊಡೆಂಚಡ್ಕ, ಅಯ್ಯಪ್ಪ ಭಜನಾ ಮಂದಿರ ಅಧ್ಯಕ್ಷ ಪ್ರಕಾಶ್ ಕಣೆಮರಡ್ಕ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಮಂಡೆಕೋಲುಬೈಲು, ಸೀತಾರಾಮ ಶಾಲಾ ಬಳಿಯವರು ವೇದಿಕೆಯಲ್ಲಿ ಇದ್ದರು. ಶಿವಪ್ರಸಾದ್ ಉಗ್ರಾಣಿಮನೆ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಬಾಲಕೃಷ್ಣ ಮಾವಂಜಿ ವಂದಿಸಿದರು. ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ ಕಾರ್ಯಕ್ರಮ ನಿರೂಪಿಸಿದರು.


ಆ.೨೭ ರಂದು ಪ್ರಾತಃ ಕಾಲ ಶ್ರೀಗಣಪತಿ ಹೋಮ ಮತ್ತು ಶ್ರೀ ದೇವರ ಪ್ರತಿಷ್ಠೆ. ಬೆಳಗ್ಗೆ ಭಜನಾ ಕಾರ್ಯಕ್ರಮ. ವಿವಿಧ ಭಜನಾ ಸಂಘಗಳ ಭಜಕರ ಸಹಭಾಗಿತ್ವದಲ್ಲಿ. ಬೆಳಗ್ಗೆ ೯ ರಿಂದ ಶಾಲಾ ಮಕ್ಕಳ ಹಾಗು ಸಾರ್ವಜನಿಕರಿಂದ ವಿವಿಧ ಸ್ಪರ್ಧಾ ಕಾರ್ಯಕ್ರಮ. ಮಧ್ಯಾಹ್ನ ಪೂಜೆ ನಂತರ ಅನ್ನಸಂತರ್ಪಣೆ ನಡೆಯುವುದು. ಮಧ್ಯಾಹ್ನ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ಸಂಜೆ ಬಹುಮಾನ ವಿತರಣೆ ನಡೆಯುವುದು.


ಶೋಭಾಯಾತ್ರೆ : ಸಂಜೆ ವೈಭವದ ಶೋಭಾಯಾತ್ರೆ ನಡೆಯುವುದು. ಪಂಚ ವಾದ್ಯ, ನಾಸಿಕ್ ಬ್ಯಾಂಡ್, ಜಲಸ್ತಂಭನದ ಬಳಿ ವಿಶೇಷ ಸಿಡಿಮದ್ದಿನ ಪ್ರದರ್ಶನ ಪ್ರಸಿದ್ಧ ಕುಣಿತ ಭಜನಾ ತಂಡಗಳು, ವೇಷಭೂಷಣಗಳು ಸಹಿತ ವಿಜೃಂಭಣೆಯಲ್ಲಿ ನಡೆಯುವುದು.