ಸುಳ್ಯ ಗಣೇಶೋತ್ಸವದ ಪ್ರಯುಕ್ತ ಮಕ್ಕಳ ಭಜನಾ ಸ್ಪರ್ಧೆ

0

ಮಕ್ಜಳಿಗೆ ಶುಭ ಹಾರೈಸಿದ
ಶಾಸಕಿ ಕು.ಭಾಗೀರಥಿ ಮುರುಳ್ಯ

ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ಆ. 27 ರಿಂದ 31 ರ ತನಕ ನಡೆಯಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಾರಂಭದ ದಿನದಂದು ಮಕ್ಕಳ ಭಜನಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಬೆಳಗ್ಗಿನಿಂದ ಸಂಜೆಯ ತನಕ ವಿವಿಧ ಭಜನಾ ಮಂಡಳಿಯ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡರು.


ಈ ಸಂದರ್ಭದಲ್ಲಿ ಸುಳ್ಯದ ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ಆಗಮಿಸಿ ಭಜನಾ ತಂಡದ ಮಕ್ಜಳಿಗೆ ಶಾಲು ಮತ್ತು ಪ್ರಶಸ್ತಿ ಪತ್ರ ನೀಡಿ ಶುಭ ಹಾರೈಸಿದರು.
ನಿರ್ಣಾಯಕರಾಗಿ ಗಾಯಕ ಸುಭಾಷ್ ಡಿ. ಕೆ, ಕೇಶವ ಮಾಸ್ಟರ್,ನ್ಯಾಯವಾದಿ ಶ್ರೀಮತಿ ಸುಮಾ ರವರು ಸಹಕರಿಸಿದರು.

ಮಂಡೆಕೋಲು, ನಾಗಪಟ್ಟಣ,ದುಗಲಡ್ಕ, ಸುಳ್ಯ, ಮುಳ್ಯ ಅಟ್ಲೂರು, ಸ್ನೇಹ ಶಾಲೆ, ಸಾಹಿತ್ಯ ಸುಳ್ಯ, ರಾಘವೇಂದ್ರ ಮಠ, ಮೇನಾಲ ತಂಡಗಳು ಭಾಗವಹಿಸಿದ್ದವು.

ಸಂಘಟಕರಾದ ಶಶಿಧರ ಎಂ.ಜೆ ಮತ್ತು ಹರಿಪ್ರಸಾದ್ ಕೊಯಿಂಗಾಜೆ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.