ರೆಂಜಾಳ ಕ್ಷೇತ್ರದಲ್ಲಿ ಚೌತಿ ಉತ್ಸವ

0

12 ತೆಂಗಿನಕಾಯಿ ಗಣಪತಿ ಹವನ, ಅಕ್ಷರಭ್ಯಾಸ, ಚೌತಿ ವಿಶೇಷ ಭಜನಾ ಸೇವೆ

ಸಾವಿರಕ್ಕೂ ಅಧಿಕ ಭಕ್ತರ ಪಾಲ್ಗೊಳ್ಳುವಿಕೆ

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಲ್ಲಿ ಒಂದಾದ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಚೌತಿ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಕ್ತಿ ಸಡಗರದಿಂದ ನೆರವೇರಿತು.
ಬೆಳಿಗ್ಗೆ ಉಷ ಪೂಜೆ ನಡೆದು ಬಳಿಕ ಭಜನಾ ಕಾರ್ಯಕ್ರಮ ನೆರವೇರಿತು.


ಬೆಳಿಗ್ಗೆ 9.30ರಿಂದ 12 ತೆಂಗಿನ ಕಾಯಿ ಗಣಪತಿ ಹವನ, ಅಕ್ಷರಭ್ಯಾಸ, ನಾಗತಂಬಿಲ ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು. ಸಂಜೆ ಚೌತಿ ವಿಶೇಷ ಭಜನಾ ಸೇವೆ, ಸಾಮೂಹಿಕ ಕಾರ್ತಿಕ ಪೂಜೆ, ಮಹಾಪೂಜ, ಪ್ರಸಾದ ವಿತರಣೆ ನಡೆಯಿತು.

ಈ ಸಂದರ್ಭದಲ್ಲಿ ಪಂಚಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗನ್ನಾಥ ಕಾಯರ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸೇವಾ ಸಮಿತಿ ಅಧ್ಯಕ್ಷ ಪುಟ್ಟಣ್ಣ ಗೌಡ ಬಾನೂರು, ಅನ್ನಪೂರ್ಣ ಸಮಿತಿಯ ಚಿನ್ನಪ್ಪ ಗೌಡ ಬೇರಿಕೆ, ಶಿವಪಂಚಾಕ್ಷರಿ ಭಜನಾ ಮಂಡಳಿ ಅಧ್ಯಕ್ಷ ಲೋಹಿತ್ ರೆಂಜಾಳ ಹಾಗೂ ದೇವಾಲಯದ ವಿವಿಧ ಸಮಿತಿಗಳ ಪದಾಧಿಕಾರಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.

ಕ್ಷೇತ್ರದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಬಳ್ಳಕಾನ ಹಾಗೂ ಅರ್ಚಕ ವೃಂದ ದವರು ಪೂಜಾ ಕಾರ್ಯ ನೆರವೇರಿಸಿದರು.