
ಸೆ. 07ರಂದು ಎಣ್ಮೂರಿನ ಶ್ರೀರಾಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಾತೃಘಟಕ ಪುತ್ತೂರು ತೀಯಾ ಸಮಾಜ ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಮುರ ಹಾಗೂ ಸಮುದಾಯದ ಹಿರಿಯರು ಜೊತೆಯಾಗಿ ದ್ವೀಪ ಪ್ರಜ್ವಲನೆಗೊಳಿಸಿದರು.
ಬಳಿಕ ಸಮುದಾಯದ ಸದಸ್ಯರಿಗೆ ಹಾಗೂ ಮಕ್ಕಳಿಗೆ ಮನೋರಂಜನಾ ಕ್ರೀಡೆಗಳನ್ನು ಏರ್ಪಡಿಸಲಾಯಿತು. ಸಾಂಪ್ರದಾಯಿಕ ತಪ್ಪಂಗಾಯಿ ಸ್ಪರ್ಧೆಯು ಆಕರ್ಷಕವಾಗಿತ್ತು.

ಬಳಿಕ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಕಲ್ಲೇರಿಯವರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ ನಡೆಯಿತು. ಶೈಕ್ಷಣಿಕವಾಗಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ಸಮುದಾಯದ ವಿದ್ಯಾರ್ಥಿಗಳಾದ ಅನುಶ್ ಎಸ್, ನಂದನ ಎಂ, ವರ್ಷಿತಾ ಎಂ, ಮೌಲ್ಯ ಎಂ.ಬಿ, ಶಿವಾನಿ ಮತ್ತು ಜೀವನ್ ಎಂ.ಪಿಯವರಿಗೆ ವಿದ್ಯಾರ್ಥಿ ವೇತನ ನೀಡಿ ಪುರಸ್ಕರಿಸಲಾಯಿತು. ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಧೃತಿ ಅಮೈ, ನಿಶಾಲ್ ಭಾಸ್ಕರ ಮುಪ್ಪೇರ್ಯ ಹಾಗೂ ಶೈಕ್ಷಣಿಕವಾಗಿ ಪದವಿ ಶಿಕ್ಷಣದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಅರ್ಪಿತಾ ಪಿ.ವಿಯವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಹಿರಿಯ ಆರೋಗ್ಯ ಸುರಕ್ಷಾಧಿಕಾರಿಯಾಗಿ ನಿವೃತ್ತಿ ಹೊಂದಿದ ಶ್ರೀಮತಿ ಬೇಬಿ ಸಿ.ಸಿ ಬಾಳಿಲ ಇವನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.









ಸ್ಪರ್ಧಾ ವಿಜೇತರಿಗೆ
ಬಳಿಕ ಬಹುಮಾನ ವಿತರಿಸಲಾಯಿತು. ಮಹಿಳೆಯರು ಮತ್ತು ಮಕ್ಕಳು ಕಾರ್ಯಕ್ರಮದ ಮುಖ್ಯ ಭಾಗವಾದ ತಿರುವಾದಿರ ಹಾಗೂ ಓಣಂ ನೃತ್ಯ ಪ್ರದರ್ಶನ ನೀಡಿದರು. ಸುಹಾಸ್ ಅಲೆಕ್ಕಾಡಿ ಸ್ವಾಗತಿಸಿ, ಶ್ರೀಮತಿ ಸುವರ್ಣ ಚಂದ್ರಿಕಾ ವಂದಿಸಿದರು. ಕು| ದಿಶಾ ಪ್ರಾರ್ಥಿಸಿದರು. ಲೋಕೇಶ್ ಬೆಳ್ಳಿಗೆ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ನಂತರ ಎಲ್ಲರಿಗೂ ಓಣಂ ಸದ್ಯ ಏರ್ಪಡಿಸಲಾಗಿತ್ತು.










