ಸೆ. 23 : ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕದಿರು ವಿನಿಯೋಗ – ನವಾನ್ನ ಭೋಜನ

0

ಸೆ. 26 : ಶ್ರೀ ದುರ್ಗಾ ತ್ರಿಕಾಲ ಪೂಜೆ

ಜಾಲ್ಸೂರಿನ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ
ನವರಾತ್ರಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

ಸೆ. 23 ರಂದು ಬೆಳಿಗ್ಗೆ ಕದಿರು ವಿನಿಯೋಗ ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ ನಂತರ ನವಾನ್ನ ಭೋಜನ ನಡೆಯಲಿದೆ.

ಸೆ. 26 ರಂದು ಶ್ರೀ ದುರ್ಗಾ ತ್ರಿಕಾಲ ಪೂಜೆ, ಸೆ.28 ರಂದು ಶುಕ್ಲ ಪಕ್ಷದ ಷಷ್ಠಿ ಕಾರ್ಯಕ್ರಮ, ನವರಾತ್ರಿ ಸಂದರ್ಭ ಪ್ರತಿದಿನ ಆಯುಧ ಪೂಜೆ ನಡೆಯಲಿದ್ದು, ಅ. 1 ರಂದು ವಿಶೇಷ ಆಯುಧ ಪೂಜೆ ನಡೆಯಲಿದೆ.

ಭಗವದ್ಭಕ್ತರು ಈ ಎಲ್ಲಾ ದೇವತಾ ಕಾರ್ಯದಲ್ಲಿ ಭಾಗಿಗಳಾಗಿ ಶ್ರೀ ದೇವರ ಗಂಧ-ಪ್ರಸಾದ ಸ್ವೀಕರಿಸಿ, ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.