ತೊಡಿಕಾನ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಮಹಾಸಭೆ

0

1.5 ಲಕ್ಷ ನಿವ್ವಳ ಲಾಭ : ಮಾಜಿ ಅಧ್ಯಕ್ಷರು – ಸಿಬ್ಬಂದಿಗೆ ಸನ್ಮಾನ

ತೊಡಿಕಾನ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷೆ ಸಾವಿತ್ರಿ ಐ ಭಟ್ ಇವರ ಅಧ್ಯಕ್ಷತೆಯಲ್ಲಿ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.

ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಹರೀಶ್ ಕುಮಾರ್ ಎಂ. ಎಸ್ , ವೈದ್ಯಾಧಿಕಾರಿ ಡಾ. ಕೇಶವ ಸುಳ್ಳಿ, ಸಂಘದ ಉಪಾಧ್ಯಕ್ಷೆ ಮೀನಾಕ್ಷಿ ಕುದ್ಕುಳಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಹಕಾರಿ ಸಂಘದ ಕಾರ್ಯದರ್ಶಿ ಶ್ರೀಮತಿ ಜಲಜಾಕ್ಷಿ ಮಹಾಸಭೆಯಲ್ಲಿ ಸಂಘದ ವರದಿಯನ್ನು ಮಂಡಿಸಿದರು. ವರದಿ ವರ್ಷದಲ್ಲಿ 7,69,191 ರೂ ಆದಾಯ ಬಂದಿದ್ದು ಇದರಲ್ಲಿ ಸಿಬ್ಬಂದಿ ವೆಚ್ಚ, ಬಿಎಂಸಿ ಸಿಬ್ಬಂದಿ ವೆಚ್ಚಗಳು ಮತ್ತು ಆಡಳಿತ ಖರ್ಚು, ಸಾದಿಲ್ವಾರು ಖರ್ಚು ಕಳೆದು ಸಂಘವು ಈ ವರ್ಷ ರೂ 1,50,655 ನಿವ್ವಳ ಲಾಭಗಳಿಸಿದೆ ಎಂದರು.
ವರದಿ ವರ್ಷದಲ್ಲಿ ರೂ 4849,165 ಮೊತ್ತದ 1,34,670 ಲೀಟರ್ ಹಾಲನ್ನು ಸದಸ್ಯರಿಂದ ಖರೀದಿ ಮಾಡಲಾಗಿದೆ. ಇದರಲ್ಲಿ 48,95,752 ರೂಪಾಯಿ ಮೌಲ್ಯದ 1,32,320 ಕೆ.ಜಿ ಹಾಲನ್ನು ದ. ಕ. ಹಾಲು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. ರೂ 87,668 ಮೊತ್ತದ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಹಕಾರಿ ಸಂಘದ ಅಧ್ಯಕ್ಷೆ ಸಾವಿತ್ರಿ ಐ ಭಟ್ ಮಾತನಾಡಿ, ಮುಂದಿನ ದಿನಗಳಲ್ಲಿ ಸಹಕಾರಿ ಸಂಘದ ಮೂಲಕ ಪ್ರತಿದಿನ 700 ರಿಂದ 750 ಲೀಟರ್ ಹಾಲು ಸಂಗ್ರಹ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೇವೆ. ಸಹಕಾರಿ ಸಂಘದ ಸುತ್ತಲೂ ಆವರಣ ಗೋಡೆ, ಇಂಟರ್ಲಾಕ್ ಅಳವಡಿಸುವುದು, ಹಸಿರುಮೇವು ಬೆಳೆಸಲು ಪ್ರೋತ್ಸಾಹ, ಹೈನುಗಾರರಿಗೆ ಸಾಲ ಸೌಲಭ್ಯ ಪಡೆದುಕೊಳ್ಳಲು ಸಹಕಾರ ನೀಡಲಾಗುವುದು ಎಂದರು.

ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಹರೀಶ್ ಕುಮಾರ್ ಎಂ ಎಸ್ ಒಕ್ಕೂಟದ ವತಿಯಿಂದ ಸದಸ್ಯರಿಗೂ ಸಿಗುವ ಸೌಲಭ್ಯಗಳು, ಹಾಲಿನ ಗುಣಮಟ್ಟ, ಸಾಲ ಸೌಲಭ್ಯ ಮತ್ತಿತರ ವಿಚಾರಗಳ ಕುರಿತು ಮಾಹಿತಿ ನೀಡಿದರು. ಒಕ್ಕೂಟದ ವೈದ್ಯಾಧಿಕಾರಿ ಡಾ. ಕೇಶವ ಸುಳ್ಳಿ ಮಾಹಿತಿ ನೀಡಿದರು.

ತೊಡಿಕಾನದಲ್ಲಿ ಹಾಲು ಸೊಸೈಟಿ ಆರಂಭವಾಗಲು ಕಾರಣಕರ್ತರಾಗಿ, ಸ್ಥಾಪಕಧ್ಯಕ್ಷರಾಗಿದ್ದ ದಿ.ಭೀಮ ಭಟ್ ಕೊಡಂಕಿರಿ ಗುಂಡಿಗದ್ದೆ ಪರವಾಗಿ ಶ್ರೀಮತಿ ನಳಿನಿ ಕೇಶವ ಪ್ರಸಾದರನ್ನು ಸನ್ಮಾನಿಸಲಾಯಿತು.
ಸಹಕಾರಿ ಸಂಘದ ಸುಸಜ್ಜಿತ ಕಟ್ಟಡ, ಬಿ ಎಂ ಸಿ ಮತ್ತು ಸುಧೀರ್ಘ ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪ್ರೇಮ ವಸಂತ ಭಟ್ , ಸಹಕಾರಿ ಸಂಘಕ್ಕೆ ಸ್ಥಳದಾನ ಮಾಡಿದ ಮಾಜಿ ಅಧ್ಯಕ್ಷೆ ಚಂದ್ರಕಲಾ ನಾರಾಯಣ ಕುತ್ತಮೊಟ್ಟೆ, ಮಾಜಿ ಅಧ್ಯಕ್ಷರಾದ ವೇದಾವತಿ ಚಿನ್ನಪ್ಪ ಕುತ್ತಮೊಟ್ಟೆ, ಸಂಘದಲ್ಲಿ ಸುದೀರ್ಘ ವರ್ಷ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ ಲೇಖವತಿ ಡಿ ಜೆ ಇವರನ್ನು ಮಹಾಸಭೆಯಲ್ಲಿ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಸರೋಜ, ಶ್ರೀಮತಿ ಶೇಷಮ್ಮ, ಶ್ರೀಮತಿ ರಾಧಮ್ಮ, ಶ್ರೀಮತಿ ಲೀಲಾವತಿ, ಶ್ರೀಮತಿ ಪದ್ಮಾವತಿ, ಶ್ರೀಮತಿ ವನಿತಾ ಎಂ ಟಿ, ಶ್ರೀಮತಿ ಚಿನ್ನಮ್ಮ, ಶ್ರೀಮತಿ ಸುಶೀಲ ವೇದಿಕೆಯಲ್ಲಿದ್ದರು.
ಆಡಳಿತ ಮಂಡಳಿ ಉಪಾಧ್ಯಕ್ಷೆ ಮೀನಾಕ್ಷಿ ಸ್ವಾಗತಿಸಿದರು. ಸದಸ್ಯೆ ಸುಶೀಲಾ ಕೋಣ ಗುಂಡಿ ವಂದಿಸಿದರು. ಕಾರ್ಯದರ್ಶಿ ಜಲಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಸಹಕಾರ ಸಂಘದ ಸಿಬ್ಬಂದಿಗಳಾದ ಧನಲಕ್ಷ್ಮಿ ಅಮೆಮನೆ, ಸರೋಜಾ ಕೆ. ಸಿ , ಯೋಗೀಶ್ವರಿ ಅಡ್ಡೆಡ್ಕ ಹಾಗೂ ಸದಸ್ಯರು ಸಹಕರಿಸಿದರು. ಮಹಾಸಭೆಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರಿಗೆ ಸ್ಟೀಲ್ ಪಾತ್ರೆಯನ್ನು ಸ್ಮರಣಿಕೆಯಾಗಿ ನೀಡಲಾಯಿತು.