ಗಾಂಧಿನಗರ :ಕರ್ನಾಟಕ ಪಬ್ಲಿಕ್ ಸ್ಕೂಲ್ ಸಮುದಾಯದತ್ತ ಶಾಲಾ ಕಾರ್ಯಕ್ರಮ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

0

ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ಮತ್ತು ಎ ಜೆ ಆಸ್ಪತ್ರೆ ಮಂಗಳೂರು ಇವರ ವತಿಯಿಂದ ಕೊಡಮಾಡಿದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಕಾರ್ಯಕ್ರಮ ಅ 30 ರಂದು ನಡೆಯಿತು.

ಶುದ್ಧ ನೀರಿನ ಘಟಕವನ್ನು ಸ್ಥಳೀಯ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ ಆರೋಗ್ಯ ಸಹಾಯಕಿಯಾದ ಶ್ರೀಮತಿ ಕನಕಾಂಗಿ,ಶಾಲಾ ಮುಖ್ಯ ಶಿಕ್ಷಕಿ ಚಂದ್ರಾವತಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಚಿದಾನಂದ ಕುದ್ಪಾಜೆ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿದಾನಂದ ಕುದ್ಪಾಜೆ ವಹಿಸಿದ್ದರು.
ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಪರಮೇಶ್ವರಿ ,ಎಸ್ ಡಿ ಎಂ ಸಿ ಸದಸ್ಯರಾದ ವಿಜಯಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಶುದ್ಧ ನೀರಿನ ಘಟಕ ಕೊಡಮಾಡಿದ ಎ ಜೆ ಆಸ್ಪತ್ರೆ ಮಂಗಳೂರು ಇದರ ಪ್ರತಿನಿಧಿಯಾದ ಕಾರ್ತಿಕ್ ಮೇಲ್ಡಲೆ ಮತ್ತು ಸಹಕಾರ ನೀಡಿದ ರಝಾಕ್ (ಅಚ್ಚು ಪ್ರಗತಿ)ಇವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪೋಷಕ ವೃಂದ, ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು
ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಾವತಿ ಪ್ರಸ್ತಾವಿಕ ಮಾತನಾಡಿ ಶಿಕ್ಷಕರಾದ ಅಶ್ವಿನಿ ಕಾರ್ಯಕ್ರಮ ನಿರೂಪಿಸಿ ಶ್ರೀಮತಿ ಪುಷ್ಪಾವತಿ ವಂದಿಸಿದರು.