







ಜೆ.ಸಿ.ಐ ಪಂಜ ಪಂಚಶ್ರೀ ಇದರ ಸಪ್ತಾಹದ ಪ್ರಯುಕ್ತ ನಡೆದ ಆಹ್ವಾನಿತ ತಂಡಗಳ ಮುಕ್ತ ಕೆಸರು ಗದ್ದೆ ವಾಲಿಬಾಲ್ ಪಂದ್ಯಾಟದಲ್ಲಿ ನಿಂತಿಕಲ್ಲಿನ ಕೆ.ಎಸ್ ಗೌಡ ಪದವಿಪೂರ್ವ ಕಾಲೇಜಿನ ತಂಡ ಸತತ ಎರಡನೇ ಬಾರಿ ರನ್ನರ್ ಆಫ್ ಪ್ರಶಸ್ತಿ ಪಡೆಯಿತು.

ಇದು ಕಾಲೇಜಿನ ವಾಲಿಬಾಲ್ ತಂಡ ಈ ವರ್ಷ ಪಡೆದ ಮೂರನೇ ಪ್ರಶಸ್ತಿಯಾಗಿದೆ. ಜೀವನ್, ವಿಖ್ಯಾತ್, ತೇಜಸ್, ತೀರ್ಥೇಶ್ , ಜೀವನ್, ಮೋಕ್ಷಿತ್, ಪ್ರಣೀತ್ ಡಿ’ಸೋಜಾ, ಹಿತೇಶ್ ಮತ್ತು ಯಶ್ವಿತ್ ಅತ್ಯುತ್ತಮ ಪ್ರದರ್ಶನ ನೀಡಿದರು. ಜೀವಶಾಸ್ತ್ರ ಉಪನ್ಯಾಸಕರಾದ ಜೀವನ್ ಎಸ್.ಎಚ್ ತಂಡದ ನೇತೃತ್ವ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಅಶೋಕ್ ಕುಮಾರ್ ಕೆ.ಎಸ್ ಹಾಗೂ ಪ್ರಾಚಾರ್ಯರಾದ ಸದಾನಂದ ರೈ ಕೂವೆಂಜ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.










