ಜಾಲ್ಸೂರು, ನೆಲ್ಲೂರುಕೆಮ್ರಾಜೆ, ಮರ್ಕಂಜ ಗ್ರಾಮಾಭಿವೃದ್ಧಿ ಸದಸ್ಯರು ಭಾಗಿ
ಗ್ರಾಮೀಣ ಕ್ಷೇತ್ರಗಳ ಅಭಿವೃದ್ಧಿಗೆ ಬ್ಯಾಂಕಿಂಗ್ ಕ್ಷೇತ್ರದ ಸಂಪೂರ್ಣ ಸಹಕಾರ : ರಾಜೇಶ್ ಶರ್ಮಾ
ಬ್ಯಾಂಕ್ ಆಫ್ ಬರೋಡದ ಸಂಯೋಜಿತ ಸಂಸ್ಥೆಯಾಗಿರುವ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ 34ನೆಯ ವಾರ್ಷಿಕ ಮಹಾಸಭೆ ಅ. 30ರಂದು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಬ್ಯಾಂಕ್ ಆಫ್ ಬರೋಡದ ಉಪ ಮಹಾಪ್ರಬಂಧಕ ರಾಜೇಶ್ ಶರ್ಮಾ ರವರು ಮಹಾಸಭೆ ಉದ್ಘಾಟಿಸಿ ಮಾತನಾಡಿ, “ರಾಷ್ಟ್ರೀಕೃತ ಬ್ಯಾಂಕುಗಳಿಂದ ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದ್ದು, ಈ ದಿಸೆಯಲ್ಲಿ ಬ್ಯಾಂಕ್ ಆಫ್ ಬರೋಡ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಮೂಲಕ ವಿಶೇಷ ನೆರವು ನೀಡಲಾಗುತ್ತಿದೆ” ಎಂದು ತಿಳಿಸಿದರು.




ಪ್ರತಿಷ್ಠಾನದ ಕಾರ್ಯದರ್ಶಿ ಬಿ. ರಾಜೇಂದ್ರ ರೈ ಯವರು
2024-25 ನೇಯ ವರ್ಷದ ಪ್ರತಿಷ್ಠಾನದ ಕಾರ್ಯಕ್ರಮಗಳ ವಿವರವನ್ನು ನೀಡಿ, “ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಷ್ಠಾನದ ಕಾರ್ಯಕ್ರಮವನ್ನು ವಿಸ್ತರಿಸುವ ಯೋಜನೆ ಇದೆ” ಎಂದು ತಿಳಿಸಿ
2025-26 ನೇಯ ವಾರ್ಷಿಕ ಯೋಜನೆಗಳ ಬಗ್ಗೆ ವಿವರ ನೀಡಿದರು.

ಲೆಕ್ಕ ಪರಿಶೋಧಕರ ಕಚೇರಿಯ ಸಿಬ್ಬಂದಿ ಕು. ಅಕ್ಷತಾರವರು ಪ್ರತಿಷ್ಠಾನದ ಕಳೆದ ವಾರ್ಷಿಕ ವರ್ಷದ ಲೆಕ್ಕ ವರದಿಯನ್ನು ಮಂಡಿಸಿದರು.
ಬ್ಯಾಂಕ್ ಆಫ್ ಬರೋಡದ ಮಂಗಳೂರು ಪ್ರಾದೇಶಿಕ ಮುಖ್ಯಸ್ಥ ಹಾಗೂ ಪ್ರತಿಷ್ಠಾನದ ಕೋಶಾಧಿಕಾರಿ ಸಿ.ವಿ.ಎಸ್ ಚಂದ್ರಶೇಖರ್ ಶುಭ ಹಾರೈಸಿದರು.
ಸಭೆಯಲ್ಲಿ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ವಿಡಿಸಿ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು. ಭಾಗವಹಿಸಿದ್ದ ಅನೇಕರು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.

ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ಸ್ವಾಗತಿಸಿ ವಂದಿಸಿದರು. ವಿಜಯ ಗ್ರಾಮಾಭಿವೃದ್ದಿ ಅಡ್ಯಾರ್ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಚಂದ್ರಿಕಾ ಆಳ್ವ ಕಾರ್ಯಕ್ರಮ ನಿರೂಪಣೆಗೈದರು.
ಮಹಾಸಭೆಯಲ್ಲಿ ಸುಳ್ಯ ತಾಲೂಕಿನಿಂದ ಜಾಲ್ಸೂರು, ನೆಲ್ಲೂರುಕೆಮ್ರಾಜೆ, ಮರ್ಕಂಜ ವಿಜಯ ಗ್ರಾಮಾಭಿವೃದ್ಧಿಯ ಸುಮಾರು 22 ಸದಸ್ಯರು ಭಾಗಿಯಾಗಿದ್ದರು.





ಸ್ವ ಉದ್ಯೋಗ ತರಬೇತಿ ಪಡೆದ ಮಹಿಳೆಯರಿಂದ ಸ್ಟಾಲ್ ಗಳಲ್ಲಿ ವಿವಿಧ ವಸ್ತುಗಳ ಮಾರಾಟ

ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಮೂಲಕ ಸ್ವಉದ್ಯೋಗ ತರಬೇತಿ ಪಡೆದ ಮಹಿಳೆಯರಿಗೆ ತಾವು ತಯಾರಿಸಿದ ಸಾಂಬಾರ್ ಪುಡಿ ಫಿನಾಯಿಲ್ ತಿಂಡಿ ತಿನಿಸುಗಳು ಇತ್ಯಾದಿ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು.











