ಎಂ.ಬಿ. ಫೌಂಡೇಶನ್ ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ದೀಪಾವಳಿ ಆಚರಣೆ, ಆರೈಕೆದಾರರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ

0

ನೇತ್ರಾವತಿ ಪಡ್ಡಂಬೈಲುರರ 79ನೇ ಹುಟ್ಟು ಹಬ್ಬ ಆಚರಣೆ

ಶಿಕ್ಷಣ ಇಲಾಖೆಯ ನಿವೃತ್ತ ಉದ್ಯೋಗಿ ರತ್ನಾಕರ್ ರಿಂದ 50 ಸಾವಿರ ದೇಣಿಗೆ

ಸುಳ್ಯದ ಜೇನು ಸೊಸೈಟಿ ಹಿಂಭಾಗದ ಎಂ.ಬಿ. ಫೌಂಡೇಶನ್ (ರಿ) ಸಾಂದೀಪ್ ವಿಶೇಷ ಶಾಲೆಯಲ್ಲಿ ದೀಪಾವಳಿ ಆಚರಣೆ, ಆರೈಕೆದಾರರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ
ಅ.28 ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೌಂಡೇಶನ್‌ನ ಅಧ್ಯಕ್ಷ ಎಂ.ಬಿ. ಸದಾಶಿವ ವಹಿಸಿ, ಮಾತನಾಡಿದರು.

ಕಾರ್ಯಕ್ರಮವನ್ನು ಸುಳ್ಯದ ಉದ್ಯಮಿ ಅಡ್ಕಾರ್ ಇಲೆಕ್ಟ್ರಾನಿಕ್ಸ್ ಮಾಲಕ ದಿನೇಶ್ ಅಡ್ಕಾರ್ ಮತ್ತು ಅವರ ಪತ್ನಿ ಚೈತ್ರದಿನೇಶ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ಧ್ಯಾನ ಕೇಂದ್ರದ ಉಮಾ ಕುಮಾರಿ,
ಸುಳ್ಯ ಮಹಿಳಾ ಸಮಾಜದ ಅಧ್ಯಕ್ಷೆ ಪುಷ್ಪಾವತಿ ಮಾಣಿಬೆಟ್ಟು, ಸುಳ್ಯ ಬಿಒ ಕಛೇರಿಯ ನಿವೃತ್ತ ಉದ್ಯೋಗಿ ರತ್ನಾಕರ, ನಿವೃತ್ತ ಪ್ರಾಂಶುಪಾಲೆ ನೇತ್ರಾವತಿ ಪಡ್ಡಂಬೈಲು, ಪತ್ರಕರ್ತೆ ಪೂಜಾಶ್ರೀ ವಿತೇಶ್ ಕೋಡಿ, ಕೆವಿಜಿ ಮೆಡಿಕಲ್ ಕಾಲೇಜು ಉದ್ಯೋಗಿ ರಜತ್ ಅಡ್ಕಾರ್,ನೆಹರು ಮೆಮೊರಿಯಲ್ ಕಾಲೇಜು ಪ್ರಾಧ್ಯಾಪಕಿ ಭವ್ಯರಜತ್ ಮೊದಲಾದವರು ಉಪಸ್ಥಿತರಿದ್ದರು

ಈ ಸಂದರ್ಭ ಆರೈಕೆದಾರರ ದಿನಾಚರಣೆಯ ಅಂಗವಾಗಿ ಶಾಲೆಯ ಮಕ್ಕಳ ಅರೈಕೆ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

ಫಿಸಿಯೋ ತೆರಫಿ ಸಾಮಾಗ್ರಿ ಹಸ್ತಾಂತರ ಮತ್ತು ಉದ್ಘಾಟನೆ

ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಫಿಸಿಯೋ ತೆರಫಿ ಮೆಟೀರಿಯಲ್ ಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿ ಅದನ್ನು ಅಡ್ಕಾರ್ ಎಲೆಕ್ಟ್ರಾನಿಕ್ಸ್ ಮಾಲಕ ದಿನೇಶ್ ಅಡ್ಕಾರ್ ದಂಪತಿಗಳು ಹಸ್ತಾಂತರಿಸಿ ಉದ್ಘಾಟಿಸಿದರು.
ಇದೇ ಸಾಂದೀಪ್ ವಿಶೇಷ ಮಕ್ಕಳ ಶಾಲೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.


ಬೆಳೆಯುತ್ತಿರುವ ಯುವ ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಸಲುವಾಗಿ.ಬಿ.ಫೌಂಡೇಶನ್ ವತಿಯಿಂದ ಪತ್ರಕರ್ತೆ ಪೂಜಾಶ್ರೀ ವಿತೇಶ್ ಕೋಡಿಯವರನ್ನು ಗೌರವಿಸಿ, ಸನ್ಮಾನಿಸಲಾಯಿತು.

ಆಗಮಿಸಿದ ಆತಿಥಿಗಳು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ನೇತ್ರಾವತಿ ಪಡ್ಡಂಬೈಲ್ ರವರ 79 ನೇ ಹುಟ್ಟು ಹಬ್ಬ ಆಚರಣೆ ನಿವೃತ್ತ ಪ್ರಾಂಶುಪಾಲೆ,ಎಂ ಬಿ ಫೌಂಡೇಶನ್ ಸಲಹೆಗಾರರಾದ ನೇತ್ರಾವತಿ ಪಡ್ಡಂಬೈಲುರವರ 79ನೇ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮ ವಿಶೇಷ ಮಕ್ಕಳ ಜೊತೆ ಆಚರಿಸಿ ಮಕ್ಕಳ ಜೊತೆ ಸಹಭೊಜನ ಏರ್ಪಡಿಸಿದರು.


ರತ್ನಾಕರ್ ರವರಿಂದ 50 ಸಾವಿರ ದೇಣಿಗೆ

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಿವೃತ್ತ ಶಿಕ್ಷಣ ಇಲಾಖೆ ಉದ್ಯೋಗಿ ರತ್ನಾಕರ್ ರವರು ಸಾಂದೀಪ್ ವಿಶೇಷ ಶಾಲೆಗೆ ಐವತ್ತು ಸಾವಿರ ಮೊತ್ತವನ್ನು ದೇಣಿಗೆಯಾಗಿ ನೀಡುವ ಭರವಸೆ ನೀಡಿದರು.

ಶಾಲಾ ಮುಖ್ಯೋಪಾದ್ಯಾಯಿನಿ ಹರಿಣಿ ಸದಾಶಿವ ಸ್ವಾಗತಿಸಿ, ಎಂ ಬಿ ಫೌಂಡೇಶನ್ ಕೋಶಾಧಿಕಾರಿ ಪುಷ್ಪಾವತಿ ಮಾಣಿಬೆಟ್ಟು ವಂದಿಸಿ, ಶರೀಪ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

ಮಹಿಳಾ ಸಮಾಜ ಪಧಾದಿಕಾರಿಗಳು ಮತ್ತು ಸದಸ್ಯರು, ಶಾಲಾ ಶಿಕ್ಷಕ ವೃಂದ, ಹಿತೈಷಿಗಳು, ಪೋಷಕ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.
ಡಿಜೆ ಫ್ರೆಂಡ್ಸ್ ದೀಪಕ್ ರವರ ಸಹಾಕರದೊಂದಿಗೆ ವಿಶೇಷ ಮಕ್ಕಳು ಹಸಿರು ಪಟಾಕಿ ಸಿಡಿಸಿ ಸಂಭ್ರಮಿಸಿದರು.