ಅರಂತೋಡು: ಬಿದ್ದು ಸಿಕ್ಕಿದ ಚಿನ್ನದ ಸರವನ್ನು ವಾರಸುದಾರರಿಗೆ ನೀಡಿ ಮಾನವೀಯತೆ ಮೆರೆದ ಸುಳ್ಯದ ಯುವಕ

0

ಸುಳ್ಯದ ಪೈಚಾರು ನಿವಾಸಿ ಯುವಕ ತನಗೆ ಬಿದ್ದುಸಿಕ್ಕಿದ ಚಿನ್ನವನ್ನು ವಾರಸುದಾರರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

ಅರಂತೋಡಿನಲ್ಲಿ ಕಾರ್ಯಚರಿಸುತ್ತಿರುವ ಹೋಟೆಲ್ ಫುಡ್’ಪಾಯಿಂಟ್ ನಲ್ಲಿ ಹತ್ತು ದಿನಗಳ ಹಿಂದೆ ಕೇರಳದ ಕಾಞಂಗಾಡ್ ಮೂಲದವರ ಚಿನ್ನ ಕಳೆದುಕೊಂಡಿದ್ದರು. ಸುಮಾರು ಒಂದು ಪವನ್ ಸರ ಅಲ್ಲಿಯ ಸಿಬ್ಬಂದಿಗೆ ಪೈಚಾರ್ ಮೂಲದ ಮುನೀರ್’ನಿಗೆ ಸಿಕ್ಕಿದೆ, ನಂತರ ಸಿಸಿ ಟಿವಿಯಲ್ಲಿ ವಾರಸುದಾರರನ್ನು ಪತ್ತೆ ಹಚ್ಚಿ, ಮರಳಿ ಅವರಿಗೆ ಆ ಚಿನ್ನವನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.