ಎಸ್ ಎಸ್ ಪಿ, ಎನ್ ಎಸ್ ಪಿ ಸರಕಾರದಿಂದ ಹಾಗೂ ಸರಕಾರೇತರವಾಗಿ ವಿದ್ಯಾರ್ಥಿಗಳಿಗೆ ಸಿಗುವ ವಿದ್ಯಾರ್ಥಿವೇತನದ ಸಂಪೂರ್ಣ ಮಾಹಿತಿ ಹಾಗೂ ಅರ್ಜಿ ಸಲ್ಲಿಸುವುದಕ್ಕಾಗಿ, ವಿದ್ಯಾರ್ಥಿವೇತನದ ಹಣ ಮಂಜೂರಾಗದವರು ಹಾಗೂ ಎಲ್ಲಾ ರೀತಿಯ ಗೊಂದಲ ನಿವಾರಣೆಗಾಗಿ ಒಂದು ದಿನದ ಕಾರ್ಯಾಗಾರವನ್ನು ನ.15 ರಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.










ಕಾರ್ಯಾಗಾರದ ಸದುಪಯೋಗವನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ತಾಲೂಕು ಮಾಹಿತಿ ಕೇಂದ್ರದ ಸಿಬ್ಬಂದಿಗಳಾದ ಕಮಾಲ್, ವಿಷ್ಣುವರ್ಧನ್
ಸಮಾಜಕಲ್ಯಾಣ ಇಲಾಖೆಯ ಸಿಬ್ಬಂದಿಗಳಾದ
ಕೃಷ್ಣ ಬಿ(ಸಹಾಯಕ ನಿದೇಶಕರು)
ಪ್ರನೀತ್ ಕುಮಾರ್, ಸೀತಾ ಕಮಾರಿ, ಕಿರಣ್ ಹಾಗೂ ವಿ ಕಾಮ್ ಟೀಮ್ ನ ಅರುಣ್ ಹಾಗೂ ಮುಕೇಶ್ ರವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.










