ಪೆರುವಾಜೆ ಗ್ರಾಮ ಪಂಚಾಯತ್ ನಲ್ಲಿ ಉಚಿತ ಫೂಟ್ ಪಲ್ಸ್ ಥೆರಫಿ ಶಿಬಿರ ಪ್ರಾರಂಭ

0

ಶಿಬಿರವು ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಲಿ : ಜಗನ್ನಾಥ ಪೂಜಾರಿ ಮುಕ್ಕೂರು

ಗ್ರಾಮ ಪಂಚಾಯತ್ ಪೆರುವಾಜೆ ಮತ್ತು ಕಂಪಾನಿಯೋ ನೆಮ್ಮದಿ ವೆಲ್ ನೆಸ್ ಸೆಂಟರ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಉಚಿತ ಫೂಟ್ ಪಲ್ಸ್ ಥೆರಫಿ ಶಿಬಿರವು ಪೆರುವಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನ.16 ರಿಂದ ಪ್ರಾರಂಭಗೊಂಡಿದ್ದು ನ.30 ರವರೆಗೆ ನಡೆಯಲಿದೆ.

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಜನರಿಗೆ ಆರೋಗ್ಯ ಮುಖ್ಯವಾದುದು ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ನಲ್ಲಿ ಉಚಿತವಾಗಿ ನಡೆಯುವ ಶಿಬಿರದಿಂದ ಜನರು ಆರೋಗ್ಯ ಕಾಪಾಡಿಕೊಳ್ಳುವಂತಾಗಲಿ.
ಗ್ರಾಮದ ಜನರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.


ಪುತ್ತೂರು ನೆಮ್ಮದಿ ವೆಲ್ ನೆಸ್ ಸೆಂಟರ್ ನ ಮಾಲಕ ಕೆ.ಪ್ರಭಾಕರ ಸಾಲ್ಯಾನ್ ಬಾಕಿಲಗುತ್ತುರವರು ಸ್ವಾಗತಿಸಿ, ಮಾಹಿತಿ ನೀಡಿ ಪ್ರತಿಯೊಬ್ಬ ಮನುಷ್ಯನಿಗೂ ಖಾಯಿಲೆ ಪ್ರಾರಂಭವಾಗುವುದು ರಕ್ತ ಸಂಚಾರದ ತೊಂದರೆಯಿಂದ.
ರಕ್ತ ಸಂಚಾರ ಸರಿಯಾಗಿ ಆದರೆ ಯಾವುದೇ ಖಾಯಿಲೆ ಬರುವುದಿಲ್ಲ.
ಫೂಟ್ ಪಲ್ಸ್ ಥೆರಫಿಯಿಂದ ರಕ್ತ ಪರಿಚಲನೆ ಮತ್ತು ನರಗಳ ಯಾವುದೇ ವಿವಿಧ ಸರಳ ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ಔಷಧಿ ರಹಿತವಾಗಿ ಅಡ್ಡಪರಿಣಾಮವಿಲ್ಲದೆ ನಿವಾರಿಸಬಹುದಾಗಿದೆ.
ಎಲ್ಲಾ ಖಾಯಿಗಳು ಇದರಿಂದ ದೂರವಾಗುತ್ತದೆ ಎಂದು ಹೇಳಿದರು.15 ದಿವಸಗಳ ಕಾಲ ಉಚಿತವಾಗಿ ಥೆರಫಿ ಚಿಕಿತ್ಸೆ ನೀಡುತ್ತಿದ್ದು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.


ಮುಖ್ಯ ಅತಿಥಿಗಳಾಗಿ ಪೆರುವಾಜೆ ಪ್ರ.ದ.ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಬ್ರಹ್ಮಣ್ಯ ಪಿ.ಎಸ್, ಗ್ರಾ.ಪಂ.ಉಪಾಧ್ಯಕ್ಷೆ ಶ್ರೀಮತಿ ಶಹಿನಾಜ್,ಪ್ರಗತಿಪರ ಕೃಷಿಕ ಮೋಹನ್ ಬೈಪಾಡಿತ್ತಾಯ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಜಯಮಾಲಾ,ಗ್ರಾಮ ಪಂಚಾಯತ್ ಸದಸ್ಯರಾದ ಪದ್ಮನಾಭ ಶೆಟ್ಟಿ ಪೆರುವಾಜೆ ,ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಉಪಸ್ಥಿತರಿರುವರು.


ಪಂಚಾಯತ್ ಸಿಬ್ಬಂದಿ ಶ್ರೀಮತಿ ಜಯಲಕ್ಷ್ಮೀ ಪ್ರಾರ್ಥಿಸಿ,ಶ್ರೀಮತಿ ಅಕ್ಷತಾ ನಾಗನಜೆ ನಿರೂಪಿಸಿ,ಪಿಡಿಒ ಜಯಮಾಲ ವಂದಿಸಿದರು.
ಶಿಬಿರವು ಪ್ರತೀದಿನ ಬೆಳಿಗ್ಗೆ ಗಂಟೆ 10.00 ರಿಂದ ಅಪರಾಹ್ನ ಗಂಟೆ 4.00 ರವರೆಗೆ ನಡೆಯಲಿದೆ.