ಅಮರ ಸಂಘಟನಾ ಸಮಿತಿ ವತಿಯಿಂದ ಹಿರಿಯಡ್ಕ ಮತ್ತು ಕೊತ್ನಡ್ಕ ಶಾಲಾ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ

0

ಅಮರ ಸಂಘಟನಾ ಸಮಿತಿ ಸುಳ್ಯ ಇದರ ವತಿಯಿಂದ ಸುಳ್ಯ ತಾಲೂಕಿನ ಬಾಳುಗೋಡುನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿರಿಯಡ್ಕ ಮತ್ತು ಕೊತ್ನಡ್ಕ ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರವು ಡಿ. 07 ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರ್ಷೀತ್ ದಾತಡ್ಕ, ಸಂಚಾಲಕರು ಅಮರ ಸಂಘಟನಾ ಸಮಿತಿ ಸುಳ್ಯ ಇವರು ವಹಿಸಿದ್ದರು ಗುಣವತಿ ಕೋತ್ನಡ್ಕ, ಹಿರಿಯರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಚೇತನ್ ಕಜೆಗದ್ದೆ ಮಾಜಿ ಅಧ್ಯಕ್ಷರು ರೋಟರಾಕ್ಟ್ ಕ್ಲಬ್ ಸುಳ್ಯ, ನೇಮಿರಾಜ್ ಕೆ.ಪಿ ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ಸ.ಕಿ.ಹಿ.ಪ್ರಾ.ಶಾಲೆ ಹಿರಿಯಡ್ಕ, ಶಿಲ್ಪಾ ಬಿ, ಸದಸ್ಯರು ಗ್ರಾಮ ಪಂಚಾಯತ್ ಬಾಳುಗೋಡು, ಶುಭ ಕೆ ಮುಖ್ಯ ಶಿಕ್ಷಕರು. ಸ.ಕಿ.ಪ್ರಾ.ಶಾಲೆ ಹಿರಿಯಡ್ಕ, ಪುರುಷೋತ್ತಮ ಕೆ, ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಸ.ಕಿ.ಪ್ರಾ.ಶಾಲೆ ಹಿರಿಯಡ್ಕ, ಜಶ್ಮಿತಾ ಕೆ,ಅಧ್ಯಕ್ಷರು ಬಾಲವಿಕಾಸ ಸಮಿತಿ ಅಂಗನವಾಡಿ ಕೇಂದ್ರ ಕೋತ್ನಡ್ಕ, ಅನಂತೇಶ್ವರಿ ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಕೇಂದ್ರ ಕೋತ್ನಡ್ಕ ಇವರು ವಹಿಸಿ ಶುಭ ಹಾರೈಸಿದರು. ಜಯಪ್ರಸಾದ್ ಸಂಕೇಶ ಸ್ವಾಗತಿಸಿ, ಚೇತನ್ ಎಲಿಮಲೆ ವಂದಿಸಿದರು. ಪ್ರದೀಪ್ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು. ಅಮರ ಸಂಘಟನಾ ಸಮಿತಿಯ ಸದಸ್ಯರಾದ ಶಿವಪ್ರಸಾದ್ ದೊಡ್ಡಿಹಿತ್ಲು, ಪ್ರಸಾದ್ ಬೊಳ್ಳೂರು, ಮನೀಶ್ ಕಡಪಳ, ಸುಧೀರ್ ದೇವ, ಬಾಲಕೃಷ್ಣ ಹೊನ್ನೆಕಡ್ಪು ಉಪಸ್ಥಿತರಿದ್ದರು.