ಬೆಂಗಳೂರಿನಿಂದ ಸುಳ್ಯದ ಕಂದಡ್ಕದ ಕಲ್ಚಾರ್ ನ ತನ್ನ ಮನೆಗೆ ಬೈಕ್ ನಲ್ಲಿ ಬರುತ್ತಿದ್ದ ಯುವಕ ಮೈಸೂರು ಸಮೀಪದ ಮಳವಳ್ಳಿ ಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದಿದೆ.









ಉಬರಡ್ಕ ಮಿತ್ತೂರು ಗ್ರಾಮದ ಕಲ್ಚಾರ್ ನಿವಾಸಿ ಶೇಷಪ್ಪ ನಾಯ್ಕರವರ ಪುತ್ರ ದೀಕ್ಷಿತ್ (25) ರವರು ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗಿಯಾಗಿದ್ದು, ಬೆಂಗಳೂರಿನಿಂದ ಹೊರಟು ಕಲ್ಚಾರ್ ನ ತನ್ನ ಮನೆಗೆ ಬುಲೆಟ್ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಮೈಸೂರು ಸಮೀಪದ ಮಳವಳ್ಳಿ ಯಲ್ಲಿ ಅಪಘಾತ ಸಂಭವಿಸಿದೆ. ತೀವ್ರ ಅಪಘಾತಕ್ಕೆ ಗಂಭೀರಗಾಯಗೊಂಡ ದೀಕ್ಷಿತ್ ರವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮನೆಯವರು ಮೈಸೂರಿಗೆ ತೆರಳಿರುವುದಾಗಿ ತಿಳಿದುಬಂದಿದೆ.
ಬೈಕ್ ಗೆ ಯಾವ ವಾಹನ ಗುದ್ದಿ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ತಿಳಿದುಬಂದಿಲ್ಲ.









