ಡಿ.16-ಜ.14 : ಪಂಜ ಸೀಮೆಯ ದೇಗುಲದಲ್ಲಿ ಧನು ಪೂಜೆ

0

ಪ್ರಾತಃ ಕಾಲ 5.30 ಕ್ಕೆ ಧನು ಪೂಜೆ

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದದಲ್ಲಿ ಡಿ.16ರಿಂದ ಜ. 14 ತನಕ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರಿಗೆ ಪ್ರಾತಃ ಕಾಲ 5.30ಕ್ಕೆ ಸರಿಯಾಗಿ ಧನು ಪೂಜೆ ನಡೆಯಲಿರುವುದು. ಪ್ರಾತ:ಕಾಲ ರುದ್ರಾಭಿಷೇಕ,ಧನು ಪೂಜೆ,ಮಹಾಪೂಜೆ ಸೇವೆಗಳು ಇರುತ್ತದೆ. ಪ್ರತೀ ದಿನ ಬೆಳಗ್ಗಿನ ಫಲಾಹಾರದ ವ್ಯವಸ್ಥೆ ಇರುತ್ತದೆ. ಒಂದು ತಿಂಗಳ ಕಾಲ ದೇವರಿಗೆ ಪ್ರಾತಃ ಕಾಲ 5.30ಕ್ಕೆ ಧನು ಪೂಜೆ ಇರುವುದರಿಂದ ಬೆಳಗ್ಗಿನ 8.00 ಗಂಟೆಯ ಪೂಜೆ ಇರುವುದಿಲ್ಲ. ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.