ಇವಾ ಫಾತಿಮಾಳಿಗೆ ಐಎಸ್‌ಟಿಎಸ್ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್

0

ಇಂಡಿಯನ್ ಸ್ಕೂಲ್ ಟ್ಯಾಲೆಂಟ್ ಸರ್ಚ್ ಸಂಸ್ಥೆ ನಡೆಸಿದ 2024-25 ಸಾಲಿನ ಅಂತಾರಾಷ್ಟ್ರೀಯ ಪರೀಕ್ಷೆಯಲ್ಲಿ ಇವಾ ಫಾತಿಮ ಬಶೀರ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ಸಾಧನೆಗಾಗಿ ಸಂಸ್ಥೆ ನೀಡುವ ಪದಕ, ಪ್ರಶಸ್ತಿ ಮತ್ತು 12 ತಿಂಗಳ ವಿದ್ಯಾರ್ಥಿ ವೇತನಕ್ಕೆ ಪಾತ್ರಳಾಗಿದ್ದಾರೆ ಐಎಸ್ ಟಿಎಸ್ ಯು ಅಂತರಾಷ್ಟ್ರೀಯ ಮಟ್ಟದಲ್ಲಿ 1 ರಿಂದ 1೦ ನೇ ತರಗತಿವರೆಗಿನ ವಿದ್ಯಾರ್ಥಿಗಳ ಮಾನಸಿಕ ಸಾಮರ್ಥ್ಯ, ಗಣಿತ, ವಿಜ್ಞಾನ ಹಾಗು ಇಂಗ್ಲಿಷ್ ವಿಷಯಗಳ ಜ್ಞಾನ ಪರೀಕ್ಷೆ ನಡೆಸುವ ಸಂಸ್ಥೆ.

ಇವಾ ಫಾತಿಮಾ ಪ್ರಸ್ತುತ ಶಾರ್ಜಾದ ಜೆಮ್ಸ್ ಮಿಲೇನಿಯಂ ಸ್ಕೂಲಿನ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿದ್ದು, ಸುಳ್ಯದ ಅರಂಬೂರಿನ ಮಹಮ್ಮದ್ ಬಶೀರ್ ಹಾಗು ಹಸೀನಾ ದಂಪತಿಗಳ ಪುತ್ರಿ.