Home Uncategorized ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜ್ ಅಮೃತ ಮಹೋತ್ಸವ ಪ್ರಯುಕ್ತ ಸದ್ಭಾವನಾ ಓಟ

ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜ್ ಅಮೃತ ಮಹೋತ್ಸವ ಪ್ರಯುಕ್ತ ಸದ್ಭಾವನಾ ಓಟ

0

500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು,ಹಿರಿಯ ವಿದ್ಯಾರ್ಥಿಗಳು ಭಾಗಿ

ಸುಳ್ಯ ಆಂಬುಲೆನ್ಸ್ ಚಾಲಕ ಮಾಲಕ ಸಂಘ ಗೃಹರಕ್ಷಕ ದಳ ಸಹಕಾರ

ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಮೃತ ಮಹೋತ್ಸವ ಡಿ. 27,28, 29 ದಿನಾಂಕಗಳಲ್ಲಿ ನಡೆಯಲಿದ್ದು ಮಹೋತ್ಸವದ ಪೂರ್ವಭಾವಿ ಕಾರ್ಯಕ್ರಮಗಳಲ್ಲಿ 10 ನೇಯ ಕಾರ್ಯಕ್ರಮ ಡಿ.15 ರಂದು ಶಾಲಾ ಎಸ್ ಡಿ ಎಂ ಸಿ ಪ್ರಾಯೋಜಕತ್ವದಲ್ಲಿ ಸದ್ಭಾವನ ಓಟ ಕಾರ್ಯಕ್ರಮ ನಡೆಯಿತು.

ಶಾಲಾ ಹಿರಿಯ ವಿದ್ಯಾರ್ಥಿ ಹಿರಿಯರಾದ ಗೋಪಾಲ್ ನಾಯರ್,ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಸವಣೂರು ಸೀತಾರಾಮ ರೈ ರವರು ಸದ್ಭಾವನ ಓಟದ ಧ್ವಜವನ್ನು ಆರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಲಾ ಮೈದಾನದಿಂದ ಆರಂಭಗೊಂಡ ಓಟ ಜ್ಯೋತಿ ಸರ್ಕಲ್ ಬಳಿ ಬಂದು ಬಳಿಕ ಅಲ್ಲಿಂದ ಗಾಂಧಿನಗರಕ್ಕೆ ತೆರಳಿ ರಥ ಬೀದಿ ಮೂಲಕ ಕುರುಂಜಿಭಾಗ್ ಕುರುಂಜಿಯವರ ವೃತ್ತದ ಬಳಿ ಬಂದು ವಿವೇಕಾನಂದ ಸರ್ಕಲ್ ಮೂಲಕ ಚಲಿಸಿ ಶಾಲಾ ಮೈದಾನದಲ್ಲಿ ಸಮಾರೋಪ ಗೊಂಡಿತು.

ಈ ಕಾರ್ಯಕ್ರಮದಲ್ಲಿ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಾಲಾ ಹಿರಿಯ ವಿದ್ಯಾರ್ಥಿಗಳು,ಪೋಷಕ ವೃಂದದವರು, ಭಾಗವಹಿಸಿದ್ದರು.

ಅಮೃತ ಮಹೋತ್ಸವ ಸಮಿತಿಯ ಸದಸ್ಯರಾದ ಗೋಕುಲ್ ದಾಸ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ, ಉಪಾಧ್ಯಕ್ಷರಾದ ಶ್ರೀಮತಿ ಡಾ. ವೀಣಾ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಂಜುಳಾ ಬಡಿಗೇರ್, ಉಪಾಧ್ಯಕ್ಷ ಹಸೈನಾರ್ ಜಯನಗರ, ಸದಸ್ಯರಾದ ರಮೇಶ್ ಕೊಡಂಕಿರಿ, ಸುಭಾಶ್ಚಂದ್ರ ಉಬ್ಬರಡ್ಕ ಮಿತ್ತೂರು, ರಾಜೇಶ್ ರೈ ಉಬರಡ್ಕ,
ಪ್ರಾಂಶುಪಾಲರಾದ ಮೋಹನ್ ಗೌಡ ಬೊಮ್ಮೆಟ್ಟಿ, ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ,ಕಾಲೇಜು ಉಪನ್ಯಾಸಕ ವೃಂದ,ಶಾಲಾ ಅಧ್ಯಾಪಕ ವೃಂದ,ಪೋಷಕರು, ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸುಳ್ಯ ತಾಲೂಕು ಅಂಬುಲೆನ್ಸ್ ಚಾಲಕ ಮಾಲಕ ಸಂಘದ ಸದಸ್ಯರು ಗಳಾದ ಸಿದ್ದೀಕ್ ಗೂನಡ್ಕ, ರಫೀಕ್ ಬಾಳೆಮಕ್ಕಿ,ಶಮೀರ್,ಶಿವ,ಮಿಥುನ್ ರವರು ತಮ್ಮ ತಮ್ಮ ಆಂಬುಲೆನ್ಸ್ ವಾಹನ ಮೂಲಕ ಸದ್ಭಾವನ ಓಟದಲ್ಲಿ ಭಾಗವಹಿಸಿ ಸಹಕಾರ ನೀಡಿದರು.

ಸುಳ್ಯ ಗೃಹರಕ್ಷಕ ದಳದವರಿಂದ ಸಿಬ್ಬಂದಿಗಳು ಜ್ಯೋತಿ ವೃತ್ತ, ಕಟ್ಟೆ ಜಂಕ್ಷನ್, ಗಾಂಧಿನಗರ ಪೆಟ್ರೋಲ್ ಬಂಕ್ ಬಳಿ, ಕುರುಂಜಿಭಾಗ್ ಜಂಕ್ಷನ್, ಮುಂತಾದ ಕಡೆಗಳಲ್ಲಿ ನಿಂತು ಸಂಚಾರ ತೊಡುಕು ಉಂಟಾಗದ ರೀತಿಯಲ್ಲಿ ಸಹಕಾರ ನೀಡಿದರು.

ಕಟ್ಟೆಕ್ಕಾರ್ಸ್ ಫ್ಯಾನ್ಸಿ ಅಂಗಡಿ ಮಾಲಕ ಶಿಯಾಬ್ ಕಟ್ಟೆಕಾರ್ಸ್ ಹಾಗೂ ತಂಡ ,ನೆಟ್ಕಾಂ ಸುಳ್ಯ ಇದರ ಮಾಲಕರ ಪಿ ಬಿ ಸುಧಾಕರ್ ರೈ ರವರ ನೇತೃತ್ವದ ತಂಡ ವಿದ್ಯಾರ್ಥಿಗಳಿಗೆ ತಂಪು ಪಾನೀಯ ನೀಡಿ ಸಹಕರಿಸಿದರು. ಉದ್ಘೋಷಣೆಯಲ್ಲಿ ಸಹಕರಿಸಿದ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.

NO COMMENTS

error: Content is protected !!
Breaking